ಧಾರವಾಡ –
SSLC ಕನ್ನಡ ಮಾಧ್ಯಮದಲ್ಲಿ ಟಾಪರ್ ಬಂದ ಮಾದನಭಾವಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ನಿಗೆ ಅಭಿನಂದನೆ ಸಲ್ಲಿಸಿ ಗೌರವಿಸಲಾಯಿತು ಹೌದು ಪರೀಕ್ಷೆಯಲ್ಲಿ ಧಾರವಾಡ ಜಿಲ್ಲೆಗೆ ಟಾಪರ್ (ಪ್ರಥಮ) ಆದ ಪ್ರೀತಿ ಕೊಟಬಾಗಿ ಇವಳಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಧಾರವಾಡ ತಾಲೂಕಾ ಘಟಕದಿಂದ ಅಭಿನಂದನೆ ಸಲ್ಲಿಸಲಾಯಿತು.
ಮಾದನಭಾವಿ ಪ್ರಾಥಮಿಕ ಶಾಲೆಯಲ್ಲಿ SSLC ಕನ್ನಡ ಮಾಧ್ಯಮ ಪರೀಕ್ಷೆಯಲ್ಲಿ 623 ಅಂಕ ಪಡೆಯುವುದರ ಮೂಲಕ ಧಾರವಾಡ ಜಿಲ್ಲೆಗೆ (ಪ್ರಥಮ) ಟಾಪರ್ ಆದಂತಹ ಧಾರವಾಡ ತಾಲೂಕಿನ ಮಾಧನಭಾವಿ ಸರ್ಕಾರಿ ಪ್ರೌಢ ಶಾಲೆಯ ಪ್ರೀತಿ ರಾಜಕುಮಾರ್ ಕೊಟಬಾಗಿ ಇವಳು ಧಾರವಾಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವ ಪ್ರಯುಕ್ತ ಇಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಧಾರವಾಡ ತಾಲೂಕು ಘಟಕದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ್ ಬಮ್ಮಕ್ಕನವರ ಮತ್ತು ತಾಲೂಕಾ ಪಂಚಾಯತ್ ಮಾಜಿ ಅಧ್ಯಕ್ಷರಾದ ರವಿವರ್ಮ ಪಾಟೀಲ ಹಾಗೂ KSPSTA ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹೊನ್ನಪ್ಪ ನವರ
ತಾಲೂಕಾ ಅಧ್ಯಕ್ಷರಾದ ಅಜೀತ ಕುಮಾರ ದೇಸಾಯಿ ಪ್ರಧಾನ ಕಾರ್ಯದರ್ಶಿ N.S.ಕಮ್ಮಾರ ಸಹಕಾರ್ಯದರ್ಶಿ ಶ್ರೀಮತಿ ಗೀತಾ ದೊಡಮನಿ ಹಾಗೂ SDMC ಅಧ್ಯಕ್ಷರಾದ ಮಂಜುನಾಥ ಕರಾಳಿ ಫ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಪ್ರಕಾಶ್ ರಾಠೋಡ ಪ್ರಾಥಮಿಕ ಶಾಲಾ ಪ್ರಧಾನ ಗುರುಮಾತೆ ಶ್ರೀಮತಿ G.N.ಅಕ್ಕಿ
ಅಳ್ನಾವಾರ CRP M.D..ಹೊಸಮನಿ ಶಿಕ್ಷಕರಾದ ಬಸವರಾಜ ಹೊರಕೇರಿ ಬಸವರಾಜ ದೊಡವಾಡ ಬಸವರಾಜ ಮಂಗಳಗಟ್ಟಿ ಪ್ರಕಾಶ್ ಜವಳಿ ಹಾಗೂ SDMC.ಸದಸ್ಯರು ಪ್ರೌಢ ಶಾಲೆಯ ಸಿಬ್ಬಂದಿ ವರ್ಗ ಮತ್ತು ಪ್ರಾಥಮಿಕ ಶಾಲೆಯ ಸಿಬ್ಬಂದಿ ವರ್ಗ ದವರು ಹಾಗೂ ಗ್ರಾಮದ ಗುರು ಹಿರಿಯರು ಈ ಅಭಿನಂ ದನಾ ಸಮಾರಂಭದಲ್ಲಿ ಹಾಜರಿದ್ದರು