ಹುಬ್ಬಳ್ಳಿ –
ಹು-ಧಾ ಮಹಾನಗರ ಪಾಲಿಕೆಯ 35ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಮಾಯಕಾರ (ಬೆಲ್ಲದ)ಅವರಿಗೆ ಭಾರಿ ಜನಬೆಂಬಲ ವ್ಯಕ್ತವಾಗಿದೆ. ಮತಯಾಚನೆಗೆ ಹೋದ ಅಭ್ಯರ್ಥಿ ಮಾಯಕಾರ ಅವರಿಗೆ ಮತದಾರರು ಆರತಿ ಬೆಳಗಿ ಸ್ವಾಗತ ಕೋರುತ್ತಿರುವುದು ವಿಶೇಷವೇ ಸರಿ

ಹೌದು ರೈತ ಕುಟುಂಬದಿಂದ ಬಂದ ಬಸವರಾಜ ಮಾಯಕಾರ ಅವರು ನೇರ,ನಿಷ್ಠುರ ನಡೆ- ನುಡಿ ಯಿಂದಲೇ ಜನಜನಿತರಾದವರು.ಅವರ ಮೇಲೆ ಒಂದೂ ಕಪ್ಪುಚುಕ್ಕೆ ಇಲ್ಲದೇ ಅವರದು ರಾಜಕೀಯ ಹಿನ್ನೆಲೆ ಕುಟುಂಬವೂ ಅಲ್ಲ

ಆದರೆ, ವಾರ್ಡ್ ನ ಹಿರಿಯರು,ಹಿತೈಷಿಗಳ ಆಗ್ರಹದ ಮೇರೆಗೆ ಚುನಾವಣೆಗೆ ಸ್ಪರ್ಧಿಸಿರುವ ಇವರಿಗೆ ಮತದಾರರು ಭಾರತೀಯ ಸಂಸ್ಕೃತಿಯ ಅನುಸಾರ ವಾಗಿಯೇ ಸ್ವಾಗತ ಕೋರುತ್ತಿದ್ದಾರೆ.

ಚುನಾವಣೆ ಪ್ರಚಾರದುದ್ದಕ್ಕೂ ಒಳ್ಳೆಯ ವ್ಯಕ್ತಿಗೆ ಅದರಲ್ಲೂ ಪ್ರಾಮಾಣಿಕರಿಗೆ ಮತ ನೀಡಿ ಎಂದು ಮತಯಾಚಣೆ ಮಾಡುತ್ತಿರುವ ಬಸವರಾಜ ಮಾಯಕಾರ ಅವರ ನಡೆ ಅವರ ಸರಳತೆಯನ್ನು ಸಾಕ್ಷಿಕರಿಸುತ್ತಿದೆ.ಹೀಗಾಗಿ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರೂ ಕೈ ಪಡೆಯ ಕಾರ್ಯಕರ್ತರ ಜತೆ ಜತೆಗೆ ಪಕ್ಷಾತೀತವಾಗಿ ಜನ ಬೆಂಬಲ ವ್ಯಕ್ತಪಡಿಸುತ್ತಿ ದ್ದಾರೆ.

ವಾರ್ಡ್ ನ ಭೈರಿದೇವರಕೊಪ್ಪ,ಈಶ್ವರನಗರ, ರೇಣು ಕಾನಗರ,ಚೈತನ್ಯ ಕಾಲೊನಿ,ಶಾಂತಿನಿಕೇತನ, ಎಪಿಎಂಸಿ ಆವರಣ,ಮಾಯಕಾರ ಕಾಲೊನಿ, ಸದಾಶಿವನಗರ ಬಡಾವಣೆಗಳಿಗೆ ಬಸವರಾಜ ಮಾಯಕಾರ ಹೋದಾಗ ಮಹಿಳೆಯರಾದಿಯಾಗಿ ಅದ್ಧೂರಿ ಸ್ವಾಗತ ನೀಡುತ್ತಿದ್ದಾರೆ.

ಈ ಮಧ್ಯೆ ಈಶ್ವರನಗರದ ಸಂಜು ದೇಸಾಯಿ ಅವರ ಧರ್ಮಪತ್ನಿ ಶೈಲಾ ಅವರು ಸಹೋದರನೇ ಗೆದ್ದುಬಾ ಎಂಬ ಹಾರೈಕೆ ಜತೆಗೆ 5000 ಸಾವಿರ ರೂ.ನೀಡಿ ಇದು ನಿಮ್ಮ ಗೆಲವಿಗೆ ನನ್ನ ಕೊಡುಗೆ ಎಂದು ಶುಭ ಕೋರಿದ್ದು ವಿಶೇಷ.ಹೀಗೆ ಹಲವಾರು ರೀತಿಯಲ್ಲಿ ಜನರು ಬಸವರಾಜ ಮಾಯಕಾರ ಅವರಿಗೆ ಬೆಂಬಲ ವಾಗಿ ನಿಂತಿದ್ದಾರೆ.