ಧಾರವಾಡ –
ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಆಂದೋಲನದ ದಿನಾಚರಣೆಯ ಪ್ರಯುಕ್ತ ಇಂದು ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಧಾರವಾಡದ ಅಜಾದ್ ಪಾರ್ಕ್ ನಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಧಾರವಾಡ ಜಿಲ್ಲಾಧ್ಯಕ್ಷರಾದ ಅನೀಲ್ ಕುಮಾರ್ ಪಾಟೀಲ್ ಅವರು ಮಾಲಾರ್ಪಣೆ ಕಾರ್ಯಕ್ರಮ ನೆರವೇರಿಸಿದರು
1942 ರಲ್ಲಿ ಮುಂಬೈನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ನಿರ್ಣಯ ತೆಗೆದು ಕೊಂಡು ಮಹಾತ್ಮಾ ಗಾಂಧೀಜಿಯವರು ದೇಶಕ್ಕೆ ಬ್ರಿಟಿಷ್ ರೆ ಭಾರತ ಬಿಟ್ಟು ತೊಲಗಿ ಆಂದೋಲನಕ್ಕೆ ಕರೆ ಕೊಟ್ಟರು.2 ನೆ ವಿಶ್ವ ಮಹಾ ಯುದ್ಧದ ಈ ಸಂದರ್ಭದಲ್ಲಿ ಬ್ರಿಟಿಷರು ದೇಶ ವ್ಯಾಪ್ತಿ ಬಹು ಪಾಲು ಕಾಂಗ್ರೆಸ್ ಮುಖಂಡರನ್ನು ಬಂಧಿಸಿ ಈ ಆಂದೋಲನವನ್ನು ವಿಫಲಗೊಳಿಸುವ ಪ್ರಯತ್ನ ಮಾಡಿದರು ಎಂದು ಅನಿಲ ಕುಮಾರ ಪಾಟೀಲ್ ಹೇಳಿದರು
ಆದರೂ ದೇಶವ್ಯಾಪಿ ಈ ಆಂದೋಲನ ಯಶಸ್ವಿ ಯಾಗಿ ನಡೆಯಿತಲ್ಲದೆ ಆಂದೋಲನ ನಿರತ ಸಹಸ್ರಾರು ಜನ ತಮ್ಮ ಪ್ರಾಣವನ್ನೂ ಕಳೆದುಕೊಂಡುರು.ಆಗಸ್ಟ್ 15 1947 ರಲ್ಲಿ ನಾವು ಪಡೆದ ಸ್ವಾತಂತ್ರ್ಯಕ್ಕೆ, “ಬ್ರಿಟಿಷ್ ರೆ ಭಾರತ ಬಿಟ್ಟು ತೊಲಗಿ” ಆಂದೋಲನವೇ ಭದ್ರ ಬುನಾದಿ ಆಯಿತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ತುರಮುರಿ,ಪಿ,ಎಚ್,ನಿರಲಕೇರಿ,ಯಾಶಿನ ಹಾವೆರಿ ಪೆಟ,ಆನಂದ ಸಿಂಗನಾಥ,ಸಿದ್ದಣ್ಣ ಸಪೂರಿ, ಮಂಜುನಾಥ ಭೊವಿ,ರೊಹನ ಹಿಪ್ಪರಗಿ,ಸ್ವಾತಿ ಮಾಳಗಿ,ಸರೊಜಾ ಪಾಟಿಲ,ಪ್ರಬಾವತಿ ವಡ್ಡಿನ, ಸೌರಬ ಮಾಸೆಕರ, ನವಿನ ಕದಂ,ರಾಜಶೇಖರ ಮೆಣಸಿನಕಾಯಿ,ಶರಣಪ್ಪ ಕೊಟಗಿ,ಪ್ರದೀಪ ಪಾಟೀಲ,ರಾಜು ಕಮತಗಿ ಇತರರು ಉಪಸ್ಥಿತ ರಿದ್ದರು