ಬೆಂಗಳೂರು –
ಆರ್ಥಿಕ ಸ್ಥಿತಿ ನೋಡಿಕೊಂಡು ಸರ್ಕಾರಿ ನೌಕರರ 7ನೇ ವೇತನ ಆಯೋಗದಂತೆ ವೇತನ ಏರಿಕೆ CM ಗ್ಯಾರಂಟಿ ಯೋಜನೆಗಳ ನಡುವೆ 7ನೇ ವೇತನ ಜಾರಿಗೆ ಬರೋದು ಗ್ಯಾರಂಟಿನಾ ರಾಜ್ಯ ಸರ್ಕಾರಿ ನೌಕರರ ಪ್ರಶ್ನೆ ಹೌದು
ರಾಜ್ಯದ ಆರ್ಥಿಕ ಸ್ಥಿತಿಗತಿಯನ್ನುನೋಡಿಕೊಂಡು 7ನೇ ವೇತನ ಆಯೋಗವನ್ನು ಜಾರಿಗೆ ತಗೆದು ಕೊಂಡು ಬಂದು ನೌಕರರ ವೇತನವನ್ನು ಹೆಚ್ಚಳ ಮಾಡೊದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ ಅವರು
ಈಗಾಗಲೇ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆ ಪರಿಷ್ಕರಿಸುವ ಸಂಬಂಧ 7ನೇ ವೇತನ ಆಯೋಗವನ್ನು ರಚನೆ ಮಾಡಲಾ ಗಿದೆ.ಈ ಒಂದು ಸಮಿತಿಯೂ ಸಲ್ಲಿಸುವ ಶಿಫಾರ ಸುಗಳನ್ನು ರಾಜ್ಯದ ಆರ್ಥಿಕ ಸ್ಥಿತಿಗತಿಗಳ ಬೆಳಕಿ ನಲ್ಲಿ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಆಯೋಗ ನೀಡುವ ಅಂತಿಮ ವರದಿ ಬಂದ ಮೇಲೆ ಪರಿಶೀಲಿಸಿ ರಾಜ್ಯದ ಆರ್ಥಿಕ ಸ್ಥಿತಿ ನೋಡಿಕೊಂಡು ಸರ್ಕಾರ ಕ್ರಮ ಜರುಗಿಸಲಿದೆ ಈಗಾಗಲೇ ಆಯೋಗದ ಮಧ್ಯಂತರ ವರದಿ ಅನ್ವಯ ಶೇ.17ರಷ್ಟು ಪರಿಹಾರ ನೀಡಲಾಗಿದೆ ಎಂದರು.
ಇದು ಒಂದು ವಿಚಾರವಾದರೆ ಸಧ್ಯ ರಾಜ್ಯ ಸರ್ಕಾರವು ತಾವು ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳ ನಡುವೆ ಸಧ್ಯ ಆರ್ಥಿಕ ಪರಸ್ಥಿತಿ ಹೇಗಿದೆ ಗೊತ್ತಿಲ್ಲ ಹೀಗಿರುವಾಗ ಈ ಒಂದು ವರದಿಯನ್ನು ಯಾವಾಗ ಸ್ವೀಕಾರ ಮಾಡೊದು ಯಾವಾಗ ಜಾರಿಗೆ ತರೊದು ಎಂಬೊದು ಗ್ಯಾರಂಟಿ ಇಲ್ಲದಂತಾಗಿದ್ದು
ಈ ಒಂದು ವಿಚಾರ ಕುರಿತಂತೆ ರಾಜ್ಯದ ಸರ್ಕಾರಿ ನೌಕರರ ಸಂಘಟನೆಯ ರಾಜ್ಯಾಧ್ಯಕ್ಷರು ಮುಖ್ಯಮಂತ್ರಿಯವರೇ ಉತ್ತರಿಸಬೇಕಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..