ದಿಂಡೋರಿ (ಮಧ್ಯಪ್ರದೇಶ) –
ಸರ್ಕಾರಿ ಶಾಲೆಯಲ್ಲಿ ಬಿಸಿಯೂಟವನ್ನು ಸೇವನೆ ಮಾಡಿದ 50 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖ ಲಾದ ಘಟನೆ ಮಧ್ಯಪ್ರದೇಶದ ದಿಂಡೋರಿಯ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದ್ದು ಮಂಗಳವಾರ ಮಧ್ಯಾಹ್ನದ ಊಟ ಮಾಡಿದ ನಂತರ 57 ವಿದ್ಯಾರ್ಥಿಗಳು ಅಸ್ವಸ್ಥರಾಗಿ ದ್ದಾರೆ
ವಿದ್ಯಾರ್ಥಿನಿಯೊಬ್ಬಳು ತನ್ನ ತಟ್ಟೆಯಲ್ಲಿದ್ದ ಸೊಪ್ಪಿನಲ್ಲಿ ಹಲ್ಲಿಯನ್ನು ಕಂಡಿದ್ದಾಳೆ.ಮಧ್ಯಪ್ರದೇಶದ ದಿಂಡೋರಿಯ ಸಾಮ್ನಾಪುರ ಬ್ಲಾಕ್‌ನ ಕಿಯೋಲಾರಿಯ ಸರ್ಕಾರಿ ಮಧ್ಯಮ ಶಾಲೆಯ ಶಿಕ್ಷಕ ಎಲ್.ಎಸ್.ಪರಸ್ತೆ ಹೇಳಿದ್ದಾರೆ. ಮಧ್ಯಾಹ್ನದ ಊಟದ ನಂತರ ಸುಮಾರು 57 ವಿದ್ಯಾರ್ಥಿ ಗಳಿಗೆ ವಾಂತಿ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು ಹೀಗಾಗಿ ಅವರೆಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸ ಲಾಗಿದೆ. ಎಲ್ಲಾ ಮಕ್ಕಳು ಅಪಾಯದಿಂದ ಪಾರಾಗಿದ್ದು ಸದ್ಯ ವೈದ್ಯರ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿ ವಿಕ್ರಮ್ ಸಿಂಗ್ ತಿಳಿಸಿದ್ದಾರೆ.