ಮುಂದುವರಿದ ಸಿಬಿಐ ವಿಚಾರಣೆ – ವಿಜಯ ಕುಲಕರ್ಣಿ, ಬಸವರಾಜ ಮುತ್ತಗಿ ಸೇರಿ ಹಲವರ ವಿಚಾರಣೆ

Suddi Sante Desk

ಧಾರವಾಡ – ಯೊಗೀಶಗೌಡ ಕೊಲೆ ಪ್ರಕರಣದ ತನಿಖೆ ತೀವ್ರಗೊಂಡಿದೆ‌‌. ಈಗಾಗಲೇ ಈ ಒಂದು ಪ್ರಕರಣದಲ್ಲಿ ಬಂಧನವಾಗಿರುವ ವಿನಯ ಕುಲಕರ್ಣಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ‌ .ಇತ್ತ ಸಿಬಿಐ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.ಇಂದು ಕೂಡಾ ಸಿಬಿಐ ಅಧಿಕಾರಿಗಳು ಹಲವರನ್ನು ವಿಚಾರಣೆ ಮಾಡಿದರು‌ .

ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ ಯನ್ನು ಮತ್ತೆ ವಿಚಾರಣೆ ಮಾಡಿದರೆ.ಇವರೊಂದಿಗೆ ಸೋದರ ಮಾವ ಚಂದ್ರಶೇಖರ ಇಂಡಿ ಕೂಡಾ ವಿಚಾರಣೆಗೆ ಒಳಪಡಿಸಲಾಯಿತು.ಇನ್ನೂ ಕೊಲೆ ಪ್ರಮುಖ ಆರೋಪಿ ಬಸವರಾಜ್ ಮುತ್ತಗಿಗೆ ಕೂಡಾ ಸಿಬಿಐ ಅಧಿಕಾರಿಗಳು ಬುಲಾವ್ ನೀಡಿದ್ದರು.ಈ ಹಿನ್ನೆಲೆ ಮುತ್ತಗಿ ಕೂಡಾ‌ ವಿಚಾರಣೆಗೆ ಆಗಮಿಸಿದರು.ಧಾರವಾಡದ ಉಪನಗರ ಠಾಣೆಗೆ ಆಗಮಿಸಿದ ಎಲ್ಲರೂ ಸಿಬಿಐ ಅಧಿಕಾರಿಗಳ ಮುಂದೆ ವಿಚಾರಣೆ ಹಾಜರಾಗಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.