ಧಾರವಾಡ –
ಯೊಗೀಶಗೌಡ ಕೊಲೆ ಪ್ರಕರಣದ ತನಿಖೆ ಜೋರಾಗಿ ನಡೆಯುತ್ತಿದೆ. ಸಿಬಿಐ ಅಧಿಕಾರಿಗಳು ಬಿಡುವಿಲ್ಲದೇ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈಗಾಗಲೇ ಮಾಜಿ ಸಚಿವ ವಿನಯ ಕುಲಕರ್ಣಿ ,ಅವರ ಸೋದರ ಮಾವ ಚಂದ್ರಶೇಖರ ಇಂಡಿ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೇ ಒಪ್ಪಿಸಿರುವ ಸಿಬಿಐ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

ಬೆಳಿಗ್ಗೆಯಿಂದಲೇ ಒಬ್ಬರ ಮೇಲೆ ಒಬ್ಬರನ್ನು ವಿಚಾರಣೆಗೆ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಕರೆಯುತ್ತಿದ್ದಾರೆ. ಸಿಬಿಐ ಅಧಿಕಾರಿಗಳಿಂದ ಬುಲಾವ್ ಬರುತ್ತಿದ್ದಂತೆ ನಟರಾಜ್ , ಆಪ್ತ ಸಹಾಯಕರಾಗಿದ್ದ ಸೋಮು ನ್ಯಾಮಗೌಡ, ಪ್ರಶಾಂತ ಕೇಕರೆ, ಹೀಗೆ ಮೂರು ಜನರು ವಿಚಾರಣೆಗೆ ಹಾಜರಾದರು.

ಒಬ್ಬರ ಮೇಲೆ ಒಬ್ಬರಂತೆ ನಾಲ್ಕು ಜನರು ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ಆಗಮಿಸಿ ಸಿಬಿಐ ಅಧಿಕಾರಿಗಳ ಮುಂದೆ ಹಾಜರಾದರು.
ಸಿಬಿಐಯಿಂದ ಮತ್ತೆ ಮಾಜಿ ಸಚಿವ ಸಹೋದರನಿಗೆ ಬುಲಾವ್
ಯೊಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ ಕುಲಕರ್ಣಿ ಸಹೋದರನಿಗೂ ಸಿಬಿಐ ಅಧಿಕಾರಿಗಳು ಇಂದು ಬುಲಾವ್ ನೀಡಿದರು.

ಸಿಬಿಐ ಅಧಿಕಾರಿಗಳಿಂದ ಬುಲಾವ್ ಬರುತ್ತಿದ್ದಂತೆ ವಿಜಯ ಕುಲಕರ್ಣಿಯವರು ನಗರದ ಉಪನಗರ ಠಾಣೆಗೆ ಹಾಜರಾದರು. ಈಗಾಗಲೇ ಸಿಬಿಐ ಅಧಿಕಾರಿಗಳ ಮುಂದೆ ಈ ಹಿಂದೆ ವಿಜಯ ಕುಲಕರ್ಣಿಯವರು ಹಲವು ಬಾರಿ ವಿಚಾರಣೆಗೆ ಹಾಜರಾಗಿದ್ದರು. ಆದರೆ ಮತ್ತೆ ಈಗ ಸಿಬಿಐ ಅಧಿಕಾರಿಗಳು ಬುಲಾವ್ ನೀಡಿದ ಹಿನ್ನಲೆಯಲ್ಲಿ ಈಗ ವಿಚಾರಣೆಗೆ ಹಾಜರಾಗಿದ್ದಾರೆ.

ಇವರಿಗಿಂತ ಮುಂಚೆ ವಿನಯ ಆಪ್ತರಾದ ಫ್ರಶಾತ ಕೇಕರೆ, ಡೈರಿ ಉಸ್ತವಾರಿ ನೋಡುತ್ತಿದ್ದ ನಟರಾಜ ಹಾಗೂ ಪ್ರಮುಖ ಆರೋಪಿ ಮುತ್ತಗಿಯವರನ್ನು ಸಿಬಿಐ ವಿಚಾರಣೆ ನಡೆಸುತ್ತಿದ್ದರು.
ಈಗ ವಿಜಯ ಕುಲಕರ್ಣಿಯವರನ್ನು ವಿಚಾರಣೆಗೆ ಕರೆದಿದ್ದು, ಮತ್ತೆ ಯಾವೆಲ್ಲ ವಿಚಾರಗಳನ್ನು ಸಿಬಿಐ ಅಧಿಕಾರಿಗಳು ಇವರಿಂದ ಹೊರತಗೆಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.