ಧಾರವಾಡ –
ಎಲ್ಲಿ ನೋಡಿದಲ್ಲಿ ಕೇಳಿದಲ್ಲಿ ಮಹಾಮಾರಿ ಕರೊನಾ ಕರೊನಾ, ದೂರದ ಚೀನಾ ದೇಶದಿಂದ ಈ ಒಂದು ಮಹಾಮಾರಿ ಮನುಷ್ಯರನ್ನು ಕಾಡುತ್ತಿದ್ದರೆ ಇನ್ನೂ ಇತ್ತ ಪ್ರಾಣಿಗಳಿಗೆ ಒಂದು ಕಾಯಿಲೆ ಈಗಾಗಲೇ ಕಾಣಸಿಕೊಂಡಿದೆ. ಹೌದು ಮನುಷ್ಯರಿಗೆ ಕರೊನಾ ಚಿಂತೆಯಾದ್ರೆ ಇನ್ನೂ ಜಾನುವಾರುಗಳಿಗೆ ಚರ್ಮ ಗಂಟು ರೋಗ ಎಂಬ ಕಾಯಿಲೆ ಕಾಣಿಸಿಕೊಂಡಿದೆ.

ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಈ ಒಂದು ಈವರೆಗೆ ಕಾಯಿಲೆ ಇರಲಿಲ್ಲ. ಚೀನಾದಿಂದ ಕರೊನಾ ನಮ್ಮ ದೇಶಕ್ಕೇ ಹೇಗೆ ಕಾಲಿಟ್ಟಿತೊ ಗೊತ್ತಿಲ್ಲ ಇತ್ತ ದಕ್ಷಿಣ ಆಪ್ರೀಕದಿಂದ ಈ ಒಂದು ಚರ್ಮ ಗಂಟು ರೋಗ ಕಾಲಿಟ್ಟಿದ್ದು ಧಾರವಾಡ ಜಿಲ್ಲೆಯಲ್ಲಿ ಜಾನುವಾರುಗಳನ್ನು ಅತಿಯಾಗಿ ಕಾಡುತ್ತಿದೆ.

ಕಳೆದ ಎರಡು ಮೂರು ತಿಂಗಳಿನಿಂದ ಈ ಒಂದು ರೋಗ ಜಿಲ್ಲೆಯಲ್ಲಿ ಹೆಚ್ಚಾಗಿದ್ದು ಇದಕ್ಕೆ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಜಾನುವಾರಗಳು ಬಲಿಯಾಗಿದ್ದು ಇನ್ನೂ ಕೂಡಾ ಸಾಯುತ್ತಿವೆ.

ಕ್ಯಾಬ್ರಿ ಎಂಬ ವೈರಸ್ ನಿಂದ ಕೂಡಿದ ಈ ಚರ್ಮ ಗಂಟು ರೋಗ ಜಾನುವಾರುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಮೂಲತಃ ದಕ್ಷಿಣ ಆಪ್ರೀಕಾ ದೇಶದ್ದಾಗಿದೆ.ಕರೊನಾ ಹಾಗೇ ಇದೊಂದು ಹೊಸ ತರಹದ ವೈರಸ್ ಆಗಿದೆ.ದಕ್ಷಿಣ ಆಪ್ರೀಕಾದಲ್ಲಿ ಇದು ಕುರಿಗಳಿಗೆ ಮಾತ್ರ ಕಾಯಿಲೆ ಬರುತ್ತಿತ್ತಂತೆ ಆದರೆ ನಮ್ಮ ದೇಶದಲ್ಲಿ ಈ ವೈರಸ್ ಕಾಲಿಟ್ಟಿದ್ದು ಈಗ ಎಲ್ಲಾ ರೀತಿಯ ಜಾನುವಾರಗಳಿಗೂ ಕಾಣಿಸಿಕೊಳ್ಳುತ್ತಿದೆ.

ಜಿಲ್ಲೆಯಲ್ಲಿ ಬಹುತೇಕ ಎಲ್ಲಾ ತಾಲೂಕುಗಳಲ್ಲಿ ಈ ಒಂದು ಕಾಯಿಲೆ ಜಾನುವಾರುಗಳಲ್ಲಿ ಕಾಣಿಸಿಕೊಂಡಿದೆ. ಈಗಾಗಲೇ 500 ಕ್ಕೂ ಹೆಚ್ಚು ಜಾನುವಾರಗಳಲ್ಲಿ ಚರ್ಮ ಗಂಟು ರೋಗ ಎಂಬ ಕಾಯಿಲೆ ಕಾಣಿಸಿಕೊಂಡಿದ್ದು ಇದನ್ನು ಈಗಾಗಲೇ ಗಂಭೀರವಾಗಿ ತಗೆದುಕೊಂಡಿರುವ ಜಿಲ್ಲಾ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ನಿಯಂತ್ರಣಕ್ಕೇ ಮುಂದಾಗಿದ್ದಾರೆ.
ಆದ್ರೂ ಕೂಡಾ ಸಮರ್ಪಕ ರೀತಿಯಲ್ಲಿ ಈ ಒಂದು ಕಾಯಿಲೆ ನಿಯಂತ್ರಣವಾಗುತ್ತಿಲ್ಲ. ಹೀಗಾಗಿ ದಿನದಿಂದ ದಿನಕ್ಕ ಈ ಒಂದು ಕಾಯಿಲೆ ಹೆಚ್ಚಾಗುತ್ತಿದ್ದು ಇದರಿಂದ ಗ್ರಾಮೀಣ ಪ್ರದೇಶದ ರೈತರು ಭಯಗೊಂಡಿದ್ದಾರೆ. ಈ ಒಂದು ಕಾಯಿಲೆ ಜಾನುವಾರುಗಳಲ್ಲಿ ಕಾಣಿಸಿಕೊಂಡ್ರೆ ಮೈಮೇಲೆ ಬಿಲ್ಲೆ ಬಿಲ್ಲೆ ಆಕಾರದ ಚರ್ಚದಲ್ಲಿ ಗಂಟುಗಳು ಎದ್ದು ಒಂಥರಾ ವಿಚಿತ್ರವಾಗಿ ಕಾಣುತ್ತದೆ.

ಅದೇ ಮುಂದೆ ಹೆಚ್ಚಾಗಿ ಆವರಿಸಿಕೊಂಡು ಜಾನುವಾರಗಳ ಪ್ರಾಣಕ್ಕೇ ಹಾನಿಯನ್ನುಂಟು ಮಾಡುತ್ತದೆ. ಮನುಷ್ಯರಿಗೆ ಸಧ್ಯ ಕರೊನಾ ಸಿಕ್ಕಾಪಟ್ಟಿಯಾಗಿ ಕಾಡುತ್ತಿದ್ದರೆ ಇತ್ತ ಚರ್ಮ ಗಂಟು ರೋಗ ಪ್ರಾಣಿಗಳಿಗೂ ಹೆಚ್ಚಾಗಿ ಕಾಡುತ್ತಿದ್ದು ಹೆಚ್ಚಾಗುವ ಮುನ್ನ ಈ ಒಂದು ಕಾಯಿಲೆಯನ್ನು ಸಂಪೂರ್ಣವಾಗಿ ನಿಯಂತ್ರಣವನ್ನು ಜಿಲ್ಲಾ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಮಾಡ್ತಾರಾ ಎಂಬದನ್ನು ಕಾದು ನೋಡಬೇಕಿದೆ.