ಹುಬ್ಬಳ್ಳಿ –
ಶಾಸಕ ಪ್ರಸಾದ ಅಬ್ಬಯ್ಯ ರ ನೂತನ ಸಾರ್ವಜನಿಕ ಸಂಪರ್ಕ ಕಚೇರಿ ಉದ್ಘಾಟನೆ ಶಾಸಕರಿಗೆ ಹೂಗುಚ್ಚ ನೀಡಿ ಶುಭಹಾರೈಸಿದ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ
ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ನೂತನ ಕಚೇರಿಯು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆವರಣದಲ್ಲಿ ಆರಂಭ ಗೊಂಡಿದೆ.ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣಗೊಂಡಿರುವ ಹೊಸ ಸಾರ್ವಜನಿಕರ ಸಂಪರ್ಕ ಕಚೇರಿಯನ್ನು ಇಂದು ಉದ್ಘಾಟನೆ ಮಾಡಲಾಯಿತು.
ಇನ್ನೂ ಇದೇ ವೇಳೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿಯವರು ಈ ಒಂದು ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಶಾಸಕ ಪ್ರಸಾದ ಅಬ್ಬಯ್ಯರಿಗೆ ಹೂಗುಚ್ಚವನ್ನು ನೀಡಿ ಶುಭವನ್ನು ಹಾರೈಸಿದರು ಪಾಲಿಕೆಯ ಆವರಣದಲ್ಲಿರುವ ಕಚೇರಿಗೆ ಆಗಮಿ ಸಿದ ಆಯುಕ್ತರು ಕಚೇರಿಯಲ್ಲಿನ ಪೂಜೆಯಲ್ಲ ಪಾಲ್ಗೊಂಡು ನಂತರ ಶಾಸಕ ಪ್ರಸಾದ್ ಅಬ್ಬಯ್ಯ ಅವರಿಗೆ ಹೂಗುಚ್ಚವನ್ನು ನೀಡಿ ಶುಭವನ್ನು ಹಾರೈಸಿದರು.
ಈ ಒಂದು ಸಂದರ್ಭದಲ್ಲಿ ಆಯುಕ್ತರೊಂದಿಗೆ ಪಾಲಿಕೆಯ ಸದಸ್ಯರು,ಅಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……