ಬೆಂಗಳೂರು –
ಅದ್ಯೋಕೋ ಏನೋ ಗೋತ್ತಿಲ್ಲ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಯಾವಾಗ ಚುನಾವಣೆ ನಡೆಯುತ್ತದೆ. ಚುನಾವಣೆ ಮಾಡ್ತಾರಾ ಇಲ್ಲ ಜನಪ್ರತಿನಿಧಿಗಳ ಅಧಿಕಾರವಾಧಿ ಮುಗಿದು ಒಂದು ವರ್ಷ ಆಗುತ್ತಾ ಬಂದರೂ ಇನ್ನೂ ಚುನಾವಣೆ ನಡೆಯುತ್ತಿಲ್ಲ ಹೀಗೆ ಹತ್ತು ಹಲವಾರು ಹುಬ್ಬಳ್ಳಿ ಧಾರವಾಡ ಜನತೆಯ ಪ್ರಶ್ನೆಗಳಿಗೆ ಇನ್ನೂ ಉತ್ತರವೇ ಸಿಗುತ್ತಿಲ್ಲ. ಈಗಾಗಲೇ ಈ ಹಿಂದೆ ಇದ್ದ 67 ವಾರ್ಡ್ ಗಳ ಬದಲಿಗೆ ಜನಸಂಖ್ಯೆಗೆ ಅನುಗುಣವಾಗಿ 82 ವಾರ್ಡ್ ಗಳಾಗಿದ್ದು ಇದಕ್ಕೇ ಮೀಸಲಾತಿ ಕೂಡಾ ಪ್ರಕಟವಾಗಿದೆ.
ಇನ್ನೇನು ಪಾಲಿಕೆಗೆ ಚುನಾವಣೆ ಮಾಡಿದರಾಯಿತು ಎನ್ನುವಷ್ಟರಲ್ಲಿ ಒಂದರ ಮೇಲೆ ಒಂದು ಸಮಸ್ಯೆಗಳು . ನಮಗೆ ಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎನ್ನುತ್ತಾ ನ್ಯಾಯಾಲಯಕ್ಕೇ ಅರ್ಜಿ ಹಾಕಿದರು. ಎಲ್ಲಾ ಅರ್ಜಿಗಳ ವಿಚಾರಣೆ ಮುಗಿದ ನಂತರ ಈಗ ಹುಬ್ಬಳ್ಳಿಯ ಕಾಂಗ್ರೇಸ್ ಪಕ್ಷದ ಮುಖಂಡ ನಾಗರಾಜ ಗೌರಿ ಪಾಲಿಕೆಗೆ ವಿನಾಕಾರಣ ಚುನಾವಣೆ ಮಾಡದೇ ವಿಳಂಬ ಮಾಡ್ತಾ ಇದ್ದಾರೆ ಎಂದು ಬೆಂಗಳೂರಿನ ಹೈಕೊರ್ಟ್ ಗೆ ಅರ್ಜಿ ಹಾಕಿದ್ದಾರೆ. ಅರ್ಜಿ ಹಾಕಿ ಬರೊಬ್ಬರಿ ಒಂದು ವರುಷಗಳ ನಂತರ ಈಗಲಾದರೂ ಪಾಲಿಕೆಗೆ ಚುನಾವಣೆ ಮಾಡಲು ನ್ಯಾಯಾಲಯ ಗ್ರೀನ್ ಸಿಗ್ನಲ್ ಕೊಡುತ್ತದೆಯಾ ಎಂದುಕೊಂಡು ಕಳೆದ ಹತ್ತು ದಿನಗಳಿಂದ ಹುಬ್ಬಳ್ಳಿ ಧಾರವಾಡ ಜನತೆ ತೀವ್ರ ಕೂತೂಹಲದಿಂದ ಕಾಯತಾ ಇದ್ದಾರೆ. ಆದ್ರೂ ಇನ್ನೂ ಆದೇಶ ಹೊರಗೆ ಬರುತ್ತಿಲ್ಲ.
ಈ ನಡುವೆ ಕಳೆದ ಮೂರು ನಾಲ್ಕು ದಿನಗಳಿಂದ ವಿಚಾರಣೆಯನ್ನು ಅಂತಿಮಗೊಳಿಸಿರುವ ವಿಭಾಗೀಯ ಪೀಠ ಬುಧವಾರ ಆದೇಶವನ್ನು ಪ್ರಕಟ ಮಾಡಲಿದೆ. ನಿನ್ನೇ ಸೋಮವಾರ ಆದೇಶ ಬರಬೇಕಾಗಿತ್ತು ಆದರೆ ಅರ್ಜಿಯನ್ನು ವಿಚಾರಣೆ ಮಾಡಿದ ನ್ಯಾಯಮೂರ್ತಿಗಳು ಅಂತಿಮ ಆದೇಶವನ್ನು ಬುಧವಾರಕ್ಕೆ ಮುಂದೂಡಿದ್ದಾರೆ. ಮಹಾನಗರ ಪಾಲಿಕೆಗೆ ಚುನಾವಣೆ ನಡೆಸುವ ಸಂಬಂಧ ಹೈಕೋರ್ಟ್‌ನಲ್ಲಿ ವಿಚಾರಣೆ ಅಂತಿಮವಾಗಿದೆ. ಬೆಂಗಳೂರಿನ ಹೈಕೊರ್ಟ್ ನಲ್ಲಿ ಈಗಾಗಲೇ ನಡೆದ ವಿಚಾರಣೆಯಲ್ಲಿ ರಾಜ್ಯ ಸರ್ಕಾರ ,ಚುನಾವಣಾ ಆಯೋಗ,ಅರ್ಜಿದಾರರು ಹೀಗೆ ಮೂವರ ಪರವಾಗಿ ನ್ಯಾಯವಾದಿಗಳಿಂದ ನ್ಯಾಯಾಧೀಶರು ವಾದ ಪ್ರತಿವಾದವನ್ನು ಆಲಿಸಿದ್ರು. ಈ ಹಿಂದೆ ಅಂದರೆ ಶುಕ್ರವಾರ ವಿಚಾರಣೆ ಮಾಡಿದ ವಿಭಾಗೀಯ ಪೀಠ ನಿನ್ನೇ ಅಂದರೆ ಸೋಮವಾರ ಸಂಜೆ ಆದೇಶವನ್ನು ಪ್ರಕಟ ಮಾಡಬೇಕಾಗಿತ್ತು. ಆದರೆ ಮತ್ತೆ ಬುಧವಾರಗೆ ಈ ಒಂದು ಅರ್ಜಿಯ ವಿಚಾರಣೆಯನ್ನು ಮತ್ತೆ ಮುಂದೂಡಿದರು.ಈಗಾಗಲೇ ಸಂಪೂರ್ಣವಾಗಿ ವಿಭಾಗೀಯ ಪೀಠದಲ್ಲಿ ವಿಚಾರಣೆ ಮಾಡಿದ ನ್ಯಾಯಮೂರ್ತಿಗಳು ಮತ್ತೆ ಚುನಾವಣಾ ಆಯೋಗ ಮತ್ತು ರಾಜ್ಯ ಸರ್ಕಾರದ ಪರ ವಕೀಲರಿಂದ ವಾದವನ್ನು ಆಲಿಸಿದ್ರು.
ಈಗಾಗಲೇ ಚುನಾವಣಾ ಆಯೋಗದ ಪರವಾಗಿ ನ್ಯಾಯವಾದಿಗಳು ಹಾಜರಾಗಿ ಮಾಹಿತಿಯನ್ನು ನೀಡಿದ್ದಾರೆ. ಇನ್ನೂ ರಾಜ್ಯ ಸರ್ಕಾರದ ಪರವಾಗಿಯೂ ಎಜಿ ಫಣೀಂದ್ರ ಅವರು ಹಾಜರಾಗಿದ್ದರು.ಇನ್ನೂ ಇತ್ತ ಚುನಾವಣೆ ವಿಳಂಬ ಕುರಿತಂತೆ ಹುಬ್ಬಳ್ಳಿಯ ಕಾಂಗ್ರೇಸ್ ಪಕ್ಷದ ಮುಖಂಡ ನಾಗರಾಜ ಗೌರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇದಾಗಿದ್ದು ಇವರ ಪರವಾಗಿ ಎಸ್ ಪಿ ಶಂಕರ್ ನ್ಯಾಯವಾದಿಗಳು ಹಾಜರಾಗಿ ವಾದವನ್ನು ಮಂಡಿಸಿದ್ರು.ಒಟ್ಟಾರೆ ಈಗಾಗಲೇ ಮೂವರು ನ್ಯಾಯವಾದಿಗಳಿಂದ ವಾದ ಪ್ರತಿವಾದವನ್ನು ಆಲಿಸಿರುವ ವಿಭಾಗೀಯ ಪೀಠದ ನ್ಯಾಯಮೂರ್ತಿಗಳು ಮತ್ತೆ ಅರ್ಜಿಯ ವಿಚಾರಣೆಯನ್ನು ಬುಧವಾರಗೆ ಮುಂದೂಡಿದಿದ್ದು ಚುನಾವಣೆ ಮಾಡುವ ಕುರಿತಂತೆ ಗ್ರೀನ್ ಸಿಗ್ನಲ್ ಅಂತಿಮ ತೀರ್ಪನ್ನು ಬುಧವಾರ ಆದ್ರೂ ಪ್ರಕಟ ಮಾಡ್ತಾರಾ ಇನ್ನೂ ಮತ್ತೆ ನ್ಯಾಯಾಲಯದ ವಿಚಾರಣೆಯನ್ನು ಮುಂದೂಡಿ ಆದೇಶವನ್ನು ಯಾವಾಗ ನೀಡುತ್ತದೆ ಎನ್ನುತ್ತಾ ಹುಬ್ಬಳ್ಳಿ ಧಾರವಾಡ ಜನತೆ ಕುತೂಹಲದಿಂದ ಕಾಯತಾ ಇದ್ದಾರೆ.