ಧಾರವಾಡದಲ್ಲಿ ಕಸ ಮುಕ್ತ ಮಾಡಲು ಪಾಲಿಕೆಯ ಹೊಸ ಪ್ಲಾನ್ – ಎಲ್ಲೆಂದರಲ್ಲಿ ಕಸ ಚೆಲ್ಲದೆ ಪಾಲಿಕೆಯವರಿಗೆ ಕೈ ಜೋಡಿಸಿ…..

Suddi Sante Desk

ಧಾರವಾಡ –

ಧಾರವಾಡ ದಲ್ಲಿ ಎಲ್ಲೆಂದರಲ್ಲಿ ಬೇಕಾ ಬಿಟ್ಟಿಯಾಗಿ ಕಸ ಚೆಲ್ಲುವ ಮುನ್ನ ಸ್ವಲ್ಪ ವಿಚಾರ ಮಾಡಿ ಮೊದಲಿನ ಹಾಗೆ ಕಸ ಬಿಸಾಡಿದರೆ ಖಂಡಿತವಾಗಿಯೂ ನಿಮಗೆ ದಂಡ ಬೀಳೊದು ಗ್ಯಾರಂಟಿ. ಹೌದು ಮಹಾನಗರ ಪಾಲಿಕೆಯ ಅಧಿಕಾರಿಗಳು ಕಸ ಮುಕ್ತ ಸಿಟಿಯನ್ನಾಗಿ ಮಾಡಲು ಹೊಸದೊಂದು ಪ್ಲಾನ್ ಮಾಡಿದ್ದಾರೆ

ಧಾರವಾಡದಲ್ಲಿ ಆರಂಭದಲ್ಲಿ ಈ ಹೊಸದಾದ ಪ್ರಯೋಗ ವನ್ನು ಆರಂಭ ಮಾಡಿದ್ದು ಪಾಲಿಕೆಯ ಅಧಿಕಾರಿಗಳ ಪ್ಲಾನ್ ಮತ್ತು ಕಾರ್ಮಿಕರ ಕೆಲಸ ದಿಂದಾಗಿ ಸಧ್ಯ ನಗರದಲ್ಲಿ ಈ ಒಂದು ಹೊಸ ಯೋಜನೆ ಆರಂಭ ಮಾಡಲಾಗಿದೆ

ಎಲ್ಲೆಂದರಲ್ಲಿ ಕಸವನ್ನು ಹಾಕುತ್ತಿದ್ದ ಸ್ಥಳಗಳನ್ನು ಗುರುತಿಸಿ ಅಲ್ಲಿ ಸ್ವಚ್ಛ ಗೊಳಿಸಿ ರಂಗೋಲಿ ಹಾಕಿ ನಂತರ ಕಸವನ್ನು ಚೆಲ್ಲದಂತೆ ಬೀದಿರುಗಳನ್ನು ಕಟ್ಟಿ ಬ್ಯಾನರ್ ವೊಂದನ್ನು ಹಾಕಲಾಗಿದೆ‌.ಇದರೊಂದಿಗೆ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸುತ್ತಾ ಎಲ್ಲೆಂದರಲ್ಲಿ ಕಸ ಹಾಕುವವರಿಗೆ ಎಚ್ಚರಿಕೆ ನೀಡಲಾಗಿದೆ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿ 3 ರ ವಾರ್ಡ್ 3 ರ ವ್ಯಾಪ್ತಿಯ ಮಹಾಂತೇಶ ನಗರ ದಲ್ಲಿ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕರು ತ್ಯಾಜ್ಯ ಎಸೆಯು ವ ಸ್ಥಳವನ್ನು ಬಂಬೂ ಮತ್ತು ಜಾಗೃತಿ ಫಲಕಗಳನ್ನು ಅಳವಡಿಸುವುದರೊಂದಿಗೆ ಹಾಗೂ ಸ್ವಚ್ಚ ಭಾರತದ ಚಿತ್ರ ಬಿಡಿಸುವ ಮೂಲಕ ಸಾರ್ವಜನಿಕರಿಗೆ ತಿಳುವಳಿಕೆ ನೀಡಿ ಅವರ ಸಹಕಾರದೊಂದಿಗೆ ವಲಯ ಸಹಾಯಕ ಆಯುಕ್ತ ರರಾದ ಆರ್ ಎಮ್ ಕುಲಕರ್ಣಿ,ಪರಿಸರ ಅಭಿಯಂತರ ರಾದ ನವೀನ್ ಎಮ್ ಏನ್ ಹಾಗೂ ವಾರ್ಡ್ ನ ಆರೋಗ್ಯ ನಿರೀಕ್ಷಕರಾದ ಶ್ರೀಮತಿ ಪದ್ಮಾವತಿ ತುಂಬಗಿ ಮೇಲ್ವಿಚಾರಕ ರಾದ ಭೀಮರಾಜ್ ಸಗಬಾಲ ನೇತೃತ್ವದಲ್ಲಿ ವಿನೂತನ ಮಾದರಿಯಲ್ಲಿ ಕಸ ಚೆಲ್ಲುವುದನ್ನು ಸಂಪೂರ್ಣ ನಿರ್ಮೂ ಲನೆಗಳಿಸಲು ಹೊಸದೊಂದು ಪ್ರಯತ್ನ ಮಾಡಲಾಗಿದೆ

ಹೌದು ನಗರದ ಮುಧೋಳಕರ ಕಾಂಪೌಂಡ್ ಜೋಶಿ ಪಾರ್ಮನಲ್ಲಿ ಇದೆ ರೀತಿ ಮಾಡಲಾಗಿದ್ದು ಇಲ್ಲಿ ಪ್ರಸ್ತುತ ಯಾವುದೇ ಕಸ ಬೀಳದೇ ಇದ್ದುದ್ದರಿಂದ ಇದೇ ಮಾದರಿ ಯನ್ನು ಮಹಾಂತೇಶ ನಗರದಲ್ಲಿ ಅಳವಡಿಸಿಕೊಳ್ಳಲಾಗಿದೆ. ಹಾಗೂ ಸಾರ್ವಜನಿಕರು ಇಂತಹ ಕಾರ್ಯಗಳಿಗೆ ಸಹಕರಿ ಸಿದ್ದೆ ಆದರೆ ಮುಂಬರುವ ದಿನಗಳಲ್ಲಿ ಸ್ವಚ್ಚ ಸರ್ವೆಕ್ಷಣ ದಲ್ಲಿ ಹುಬ್ಬಳ್ಳಿ ಧಾರವಾಡ ಮಹಾ ನಗರ ಪಾಲಿಕೆ‌ ಇನ್ನು ಹೆಚ್ಚಿನ ಸ್ಥಾನದಲ್ಲಿ ಕಂಗೊಳಿಸಲಿದೆ ಒಟ್ಟಾರೆ ಪಾಲಿಕೆಯ ವಿನೂತನ ಈ ಒಂದು ಕಾರ್ಯಕ್ಕೆ ಸಾರ್ವಜನಿಕರು ಸಾಥ್ ನೀಡಿದರೆ ನಗರ ಪ್ರದೇಶಗಳು ಸ್ಮಾರ್ಟ್ ಆಗಲಿವೆ.

ವೆಂಕಟೇಶ್ ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.