ಹುಬ್ಬಳ್ಳಿ ಧಾರವಾಡ –
ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ಕ್ರಿಕೇಟ್ ಬೆಟ್ಟಿಂಗ್ ಆಡುತ್ತಿದ್ದವರ ಮೇಲೆ ಕಮರಿಪೇಟ್ ಪೊಲೀಸ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ರವರಾದ
ಶ್ಯಾಂರಾಜ್ ಎಸ್ ಸಜ್ಜನ ಖಚಿತ ಮಾಹಿತಿಯ ಮೇರೆಗೆ ಹುಬ್ಬಳ್ಳಿ ಶಹರದ ಕಮರಿಪೇಟ್ ಪೊಲೀಸ ಠಾಣೆಯ ಹದ್ದಿಯ ಪೈಕಿ ಗವಿಓಣಿಯಲ್ಲಿ ಕ್ರಿಕೇಟ್ ಬೆಟ್ಟಿಂಗ್ ಎಂಬ ಜೂಜಾಟ ನಡೆಸುತ್ತಿದ್ದಾಗ ದಾಳಿ ಮಾಡಿ
ಆರೋಪಿಯನ್ನು ಬಂಧಿಸಲಾಗಿದೆ.

ಶ್ರೀಕಾಂತ ತಂದೆ ತುಳಜಾರಾಮಸಾ ಕೊಲ್ಹಾಪೂರೆ ವಯಾಃ 45 ವರ್ಷ ಸಾಃ ಹುಬ್ಬಳ್ಳಿ. ಇತನನ್ನು ದಸ್ತಗೀರ ಮಾಡಿ ಇತನಿಂದ 40,000/- ರೂ ನಗದು ಹಣ ವಶಕ್ಕೆ ಪಡೆದುಕೊಂಡು ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ. ಈ ಪೈಕಿ ಇನ್ನೊಬ್ಬ ಆರೋಪಿತನು ಪರಾರಿ ಇರುತ್ತಾನೆ. ಈ ಪ್ರಕರಣಗಳನ್ನು ಭೇಧಿಸಿದ ಕಮರಿಪೇಟ್ ಪೊಲೀಸ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ರವರಾದ ಶ್ಯಾಂರಾಜ್ ಎಸ್ ಸಜ್ಜನ ಹಾಗೂ ತಂಡವು ಕರ್ತವ್ಯ ನಿರ್ವಹಿಸಿದ್ದು, ಇವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ.