ಹುಬ್ಬಳ್ಳಿ –
ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡೆಯಿತು. ನಗರದ ರೈಲ್ವೆ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಮಾಸಾಚರಣೆ ಕಾರ್ಯಕ್ರಮದಲ್ಲಿ ಆರ್ಥಿಕ ಮತ್ತು ಮಾದಕ ವಸ್ತುಗಳ ಅಪರಾಧ ಪೊಲೀಸ್ ಠಾಣೆಯ ಪಿಎಸೈ ಸದಾಶಿವ ಕಾನಟ್ಟಿ ಯವರು ಸಾರ್ವಜನಿಕರಿಗೆ ತಿಳುವಳಿಕೆಯನ್ನು ಮೂಡಿಸಿದ್ರು.

ನಗರದ ಹಲವೆಡೆ ಇಲಾಖೆಯ ಸಿಬ್ಬಂದ್ದಿಗಳೊಂದಿಗೆ ತೆರಳಿ ಸಾರ್ವಜನಿಕರಿಗೆ ಅಪರಾಧಗಳ ಕುರಿತಂತೆ ತಿಳುವಳಿಕೆಯನ್ನು ಮೂಡಿಸಿದ್ರು. ಇದೇ ವೇಳೆ ಮಾದಕ ವಸ್ತುಗಳ ಬಳಕೆ ಮಾರಾಟ ಸಾಗಾಟ ಸೇರಿದಂತೆ ಹಲವು ಅಪರಾಧಗಳ ಕುರಿತಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಾರ್ವಜನಿಕರಿಗೆ ತಿಳುವಳಿಕೆಯನ್ನು ಮೂಡಿಸಿದ್ರು.

ನಗರದ ಹಲವೆಡೆ ಸಾರ್ಜಜನಿಕರ ಪ್ರದೇಶಗಳಲ್ಲಿ ತೆರಳಿ ಅಪರಾಧಗಳ ಕುರಿತಂತೆ ಸಾರ್ಜಜನಿಕರಿಗೆ ತಿಳುವಳಿಕೆಯನ್ನು ಮೂಡಿಸಿ ಜಾಗೃತಿಯನ್ನು ಮೂಡಿಸಲಾಯಿತು.

ಇನ್ನೂ ಈ ಒಂದು ಕಾರ್ಯಕ್ರಮದಲ್ಲಿ ಪಿಎಸೈ ಸದಾಶಿವ ಕಾನಟ್ಟಿಯವರೊಂದಿಗೆ ಟಿ ವಿ ಕಂಬಾಳಿಮಠ, ಎಸ್ ವೈ ಸುಣಗಾರ,ಆರ್ ಎನ್ ಕೋಳಿ, ಎ ಎಸ್ ತಹಶೀಲ್ದಾರ ,

ಎಸ್ ಎಮ್ ಕುರಹಟ್ಟಿ, ಎಮ್ ಹೆಚ್ ಹಾಲವರ,ಪ್ರಕಾಶ ಚಿಕ್ಕನಗೌಡರ, ಫಕೀರೇಶ ಗೊಬ್ಬರಗುಂಪಿ,ಸಿ ಡಿ ಬೆಳ್ಳಕ್ಕಿ ಸೇರಿದಂತೆ ಹಲವು ಸಿಬ್ಬಂದಿಗಳು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.