ಲಕ್ನೋ –
ರಾಮ ಮಂದಿರ ನಿರ್ಮಾಣಕ್ಕೆ 27 ದಿನಗಳಲ್ಲಿ ದೇಶದ ಮೂಲೆ ಮೂಲೆಗಳಿಂದ ಕೋಟಿ ಕೋಟಿ ರೂಪಾಯಿ ದೇಣಿಗೆ ರೂಪದಲ್ಲಿ ಬಂದಿದೆ. ದೇವಸ್ಥಾನ ನಿರ್ಮಾಣದ ಹಿನ್ನೆಲೆಯಲ್ಲಿ ದೇಶದಾದ್ಯಂತ ನಿಧಿ ಇನ್ನೂ ಕೂಡಾ ಹರಿದು ಬರುತ್ತಿದೆ. ಇಲ್ಲಿಯವರೆಗೂ 27 ದಿನಗಳಲ್ಲಿ ಬರೋಬ್ಬರಿ ರೂ. 1,511 ಕೋಟಿ ನಿಧಿ ಹರಿದು ಬಂದಿದೆ.
ಈ ಕುರಿತು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಖಜಾಂಚಿ ಸ್ವಾಮಿ ಗೋವಿಂದ ದೇವಗಿರಿ ತಿಳಿಸಿದ್ದಾರೆ. ಈ ನಿಧಿ ಅಭಿಯಾನ ಫೆ. 27ರಿಂದ ಪ್ರಾರಂಭವಾಗಿದೆ. ಅಲ್ಲದೇ, ಫೆ. 11ರ ವರೆಗೆ ಬರೋಬ್ಬರಿ ರೂ. 1,511 ಕೋಟಿ ಸಂಗ್ರಹವಾಗಿದೆ. ಚಿಕ್ಕ ಮಕ್ಕಳು ಕೂಡ ಮಂದಿರ ಕಟ್ಟಲು ಸಾಥ್ ನೀಡುತ್ತಿದ್ದಾರೆ. ಅಲ್ಲದೇ, ಫೆ. 27ರ ವೇಳೆಗೆ ದೇಶದ ಮೂಲೆ ಮೂಲೆಯಲ್ಲಿಯೂ ನಿಧಿ ಸಂಗ್ರಹ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು.ಬರೊಬ್ಬರಿ 70 ಎಕರೆ ಪ್ರದೇಶದಲ್ಲಿ ಮಂದಿರ ನಿರ್ಮಾಣವಾಗುತ್ತಿದೆ.