ಹುಬ್ಬಳ್ಳಿ –
ಮನೆಯಲ್ಲಿನ ಸಿಲಿಂಡರ್ ಬ್ಲಾಸ್ಟ್ ಆಗಿ ಓರ್ವ ಸಾವಿಗೀಡಾದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ಯಲ್ಲಿ ನಡೆದಿದೆ.ಇನ್ನೂ ಒರ್ವ ಮಗುವಿಗೆ ಗಾಯವಾಗಿದ್ದು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.ಯಲ್ಲಪ್ಪ ತಮ್ಮಣ್ಣವರ (35) ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾನೆ.

ಇನ್ನೂ ಈ ಒಂದು ಘಟನೆಯಲ್ಲಿ ಒಂದು ವರ್ಷದ ಹೆಣ್ಣು ಮಗುವಿಗೆ ಗಂಭೀರ ಗಾಯವಾಗಿದ್ದು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ

ಸಾವು ಬದುಕಿನ ನಡುವೆ ಈ ಒಂದು ಮಗು ಹೋರಾಟ ನಡೆಸುತ್ತಿದ್ದು ಹೆಣ್ಣು ಮಗು ಹೊಳೆ ಯಮ್ಮ ಚಿಕಿತ್ಸೆಗೆ ಪಡೆಯುತ್ತಿದ್ದಾಳೆ.ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇನ್ನೂ ಈ ಒಂದು ವಿಚಾರ ತಿಳಿದ ಮಾಜಿ ಸಚಿವ ಸಂತೋಷ ಲಾಡ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದು ಸೂಕ್ತ ರೀತಿಯಲ್ಲಿ ನೆರವಿಗೆ ಭರವಸೆ ನೀಡಿದ್ದಾರೆ.