ಬೆಂಗಳೂರು –
ಅಂತರ್ ವಿಭಾಗದಿಂದ ವರ್ಗಾವಣೆಗೊಂಡ ಪ್ರೌಢಶಾಲಾ ಸಹ ಶಿಕ್ಷಕರ ವಿಭಾಗವಾರು ಜೇಷ್ಠತಾ ಪಟ್ಟಿಯಲ್ಲಿ ಪ್ರೌಢ ಶಾಲಾ ಸಹ ಶಿಕ್ಷಕರ ಹುದ್ದೆಗೆ ಹಾಜರಾದ ದಿನಾಂಕವನ್ನು ಪರಿಗಣಿಸಿ ಜೇಷ್ಠತಾ ಪಟ್ಟಿ ಬಿಡುಗಡೆ ಮಾಡುವಂತೆ ರಾಜ್ಯದ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ರಾಜ್ಯಾಧ್ಯಕ್ಷ ಪವಾಡೆಪ್ಪ ಒತ್ತಾಯ ಮಾಡಿದ್ದಾರೆ.

ಮಾನ್ಯ ಶಿಕ್ಷಣ ಸಚಿವರಿಗೆ ಹಾಗೂ ಇಲಾಖಾಧಿಕಾರಿಗಳಿಗೆ ಈ ಮೂಲಕ ಮನವಿ ಮಾಡಿದ್ದು ಪ್ರೌಢಶಾಲಾ ಸಹ ಶಿಕ್ಷಕರು ಅಂತರ ಭಾಗದಿಂದ ವರ್ಗಾವಣೆಗೊಂಡು ಬೇರೆ ವಿಭಾಗಕ್ಕೆ ಬಂದರೆ ಆ ವಿಭಾಗದ ಜೇಷ್ಠತಾ ಪಟ್ಟಿ ಮಾಡು ವಾಗ ಸೇವೆಗೆ ಸೇರಿದ ದಿನಾಂಕವನ್ನು ಪರಿಗಣಿಸಿ ಸೇವಾ ಹಿರಿತನದ ಮೇಲೆ ಮುಂಬಡ್ತಿ ನೀಡಬೇಕೆಂದು ಸಮಸ್ತ ಶಿಕ್ಷಕರ ಪರವಾಗಿ ಧ್ವನಿ ಎತ್ತಿ ಒತ್ತಾಯವನ್ನು ಮಾಡಿದ್ದಾರೆ.


ಹಲವಾರು ಪ್ರೌಢಶಾಲಾ ಶಿಕ್ಷಕರು ವರ್ಗಾವಣೆಗೊಂಡಿದ್ದು ನ್ಯಾಯಾಲಯ ಮೆಟ್ಟಿಲೇರಿದ್ದು ನ್ಯಾಯಾಲಯದಿಂದ ಆದೇಶ ವಿದ್ದರೂ ಜೇಷ್ಠತಾ ಪಟ್ಟಿ ಮಾಡುತ್ತಿಲ್ಲ ಸಾಕಷ್ಟು ಅನುಭವ ಸಾಕಷ್ಟು ಸೇವೆ ಸಲ್ಲಿಸಿದರೂ ಕಿರಿಯ ಶಿಕ್ಷಕರ ಕೆಳಗೆ ಕೆಲಸ ಮಾಡದು ಅವೈಜ್ಞಾನಿಕ ನಿಯಮ ಮಾನ್ಯ ಶಿಕ್ಷಣ ಸಚಿವರು ಪ್ರೌಢಶಾಲಾ ಸಹ ಶಿಕ್ಷಕರ ಸೇವೆಗೆ ಸೇರಿ ದಿನಾಂಕವನ್ನು ಪರಿಗಣಿಸಿ ಪ್ರತಿ ವಿಭಾಗದಲ್ಲಿಯೂ ಜೇಷ್ಠತಾ ಪಟ್ಟಿ ತಯಾರಿಸಲು ಆದೇಶಿಸಬೇಕೆಂದು ಕರ್ನಾಟಕ ರಾಜ್ಯ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಪವಾಡೆಪ್ಪ ಆಗ್ರಹಪಡಿಸಿದ್ದಾರೆ