ನಾಳೆ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಮಾಡಿ – ಧಾರವಾಡ ಜಿಲ್ಲೆಯ ಶಿಕ್ಷಕರಿಗೆ ಡಿಡಿಪಿಐ ಸೂಚನೆ…..

Suddi Sante Desk

ಧಾರವಾಡ –

ನಾಳೆ ಡಾ ಸರ್ವಪಲ್ಲಿ ಡಾ ರಾಧಾಕೃಷ್ಣನ್ ಜನ್ಮ ದಿನಾಚರಣೆ.ಇವರ ಹುಟ್ಟು ಹಬ್ಬದ ದಿನದಂದು ಪ್ರತಿ ವರ್ಷ ಆಚರಣೆ ಮಾಡುವ ಶಿಕ್ಷಕರ ದಿನಾಚರಣೆ ಯನ್ನು ಪ್ರತಿಯೊಂದು ಶಾಲೆಗಳಲ್ಲೂ ಆಚರಣೆ ಮಾಡುವಂತೆ ಧಾರವಾಡ ಡಿಡಿಪಿಐ ಮೋಹನ ಕುಮಾರ ಹಂಚಾಟೆ ಸೂಚನೆ ನೀಡಿದ್ದಾರೆ.

ಸುದ್ದಿ ಸಂತೆ ಯೊಂದಿಗೆ ಮಾತನಾಡಿದ ಅವರು ನಾಳೆ ರವಿವಾರ ಇದೆ ಇದರೊಂದಿಗೆ ಶಿಕ್ಷಕರ ದಿನಾಚರಣೆ ಕೂಡಾ ಬಂದಿದ್ದು ಹೀಗಾಗಿ ಜಿಲ್ಲೆಯ ಎಲ್ಲಾ ಶಿಕ್ಷಕರಿಗೆ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಯನ್ನು ಮಾಡುವಂತೆ ಸೂಚನೆ ಮಾಡಲಾಗಿದೆ ಎಂದರು

ಮಕ್ಕಳು ಯಾವುದೇ ಕಾರಣಕ್ಕೂ ನಾಳೆ ಶಾಲೆಗೆ ಬರೋದಿಲ್ಲ ಶಿಕ್ಷಕರೇ ಶಾಲೆಯಲ್ಲಿ ಸರಳವಾಗಿ ಶಿಕ್ಷಕರ ದಿನಾಚರಣೆ ಯನ್ನು ಆಚರಣೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು. ಹೀಗಾಗಿ ನಾಳೆ ಧಾರವಾಡ ಜಿಲ್ಲೆಯ ಎಲ್ಲಾ ಶಿಕ್ಷಕರು ಶಾಲೆಗೆ ಹೋಗಿ ಶಿಕ್ಷಕರ ದಿನಾಚರಣೆಯನ್ನು ಆಚರಣೆ ಮಾಡಬೇಕು ಎಂದಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.