This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

international News

ಹೆಣ್ಣು ಮಗುವಿಗೆ ಜನ್ಮ ನೀಡಿದ ಡಿವಿಲಿಯರ್ಸ್ ಪತ್ನಿ

WhatsApp Group Join Now
Telegram Group Join Now

ಜೋಹಾನ್ಸ್‌ಬರ್ಗ್ – ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್ RCB ತಂಡದ ಸ್ಟಾರ್‌ ಎಬಿ ಡಿವಿಲಿಯರ್ಸ್‌ (ಎಬಿಡಿ) ಪತ್ನಿ ಡೇನೀಲ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಕುರಿತು ಸ್ಫೋಟಕ ಬ್ಯಾಟ್ಸ್‌ಮನ್ ಎಬಿಡಿ ತಮ್ಮ ಇನ್‌ಸ್ಟಾಗ್ರಾಂ ಮತ್ತು ಫೇಸ್ ಬುಕ್ ನಲ್ಲಿ ಖುಷಿ ಹಂಚಿಕೊಂಡಿದ್ದಾರೆ.

ಪತ್ನಿ ಹಾಗೂ ಮಗುವಿನೊಂದಿಗೆ ಇರುವ ಫೋಟೋವನ್ನು ಡಿವಿಲಿಯರ್ಸ್‌ ಪ್ರಕಟಿಸಿದ್ದು, ಎಬಿಡಿ ದಂಪತಿಗೆ ಮೂರನೇ ಮಗು ಇದಾಗಿದ್ದು, ಇಬ್ಬರು ಗಂಡು ಮಕ್ಕಳಿದ್ದಾರೆ. ಹೆಣ್ಣು ಮಗುವಿಗೆ ಯೆಂಟೆ ಎಂದು ಹೆಸರಿಡಲಾಗಿದೆ.

2013ರಲ್ಲಿ ಮದುವೆಯಾದ ಈ ಜೋಡಿಗೆ 2015 ರಲ್ಲಿ ಮೊದಲ ಮಗ ಅಬ್ರಹಾಂ ಡಿ ವಿಲಿಯರ್ಸ್‌ ಜನಿಸಿದರೆ, 2017 ರಲ್ಲಿ ಜಾನ್ ಡಿ ವಿಲಿಯರ್ಸ್‌ ಜನಿಸಿದರು. ಇದೀಗ ಹೆಣ್ಣುಮಗುವಿನ ಜನನದಿಂದಾಗಿ ಎಬಿಡಿ ದಂಪತಿಯ ಸಂತೋಷ ಇಮ್ಮಡಿಗೊಂಡಿದೆ. ಇತ್ತೀಚೆಗೆ ಯುಎಇ ಯಲ್ಲಿ ಮುಕ್ತಾಯಗೊಂಡ ಐಪಿಎಲ್‌ನಲ್ಲಿ ಎಬಿಡಿ ಒಳಗೊಂಡ ಆರ್‌ಸಿಬಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. 15 ಪಂದ್ಯಗಳನ್ನಾಡಿದ ಎಬಿಡಿ ಸ್ಟ್ರೈಕ್‌ರೇಟ್ 158.74 ರಂತೆ 5 ಅರ್ಧಶತಕ ಒಳಗೊಂಡಂತೆ 454 ರನ್ ಬಾರಿಸಿ ತಮ್ಮ ಬ್ಯಾಟಿಂಗ್ ಸರಾಸರಿ ಕಾಯ್ದುಕೊಂಡಿದ್ದಾರೆ.

ಎಬಿ ಡಿವಿಲಿಯರ್ಸ್‌, ಮುಂಬರುವ ಬಿಗ್ ಬಾಷ್ ಲೀಗ್‌ನಿಂದ ಹೊರಗುಳಿದಿದ್ದಾರೆ. 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಎಬಿಡಿ ವಿದಾಯ ಹೇಳಿದ್ದಾರೆ. 36 ವರ್ಷದ ಎಬಿ ಡಿವಿಲಿಯರ್ಸ್‌, ಟಿ20 ವಿಶ್ವಕಪ್‌ಗೆ ವಾಪಸ್ ವೇಳೆಗೆ ರಾಷ್ಟ್ರೀಯ ತಂಡಕ್ಕೆ ವಾಪಸಾಗುವ ನಿರ್ಧರಿಸಿದ್ದರೂ ಟೂರ್ನಿಯೇ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ.


Google News

 

 

WhatsApp Group Join Now
Telegram Group Join Now
Suddi Sante Desk