ಉತ್ತರಾಖಂಡ –
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾರಿ ಹಿಮ ಕುಸಿತ ಉಂಟಾಗಿದ್ದು, ಘಟನೆ ಸಂಭವಿಸಿದ ಸ್ಥಳದಲ್ಲಿ ನೂರಕ್ಕೂ ಹೆಚ್ಚು ಕಾರ್ಮಿಕರು ಇದ್ದರು.ಚಮೋಲಿ ತಪೋವನ ಪ್ರದೇಶದಲ್ಲಿ 10 ಮೃತದೇಹಗಳು ಪತ್ತೆಯಾಗಿವೆ. ಐಟಿಬಿಪಿ ಯೋಧರು, NDRF ,SDRF ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.
250 ಐಟಿಬಿಪಿ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.ಚಮೋಲಿ ತಪೋವನ ಪ್ರದೇಶದಲ್ಲಿ ಮೃತ ದೇಹಗಳು ಪತ್ತೆಯಾಗಿದ್ದು, ಇದೇ ಸ್ಥಳದ ಸುತ್ತ ಮುತ್ತ ಹುಡುಕಾಟ ನಡೆಸಲಾಗಿದೆ. ರೇನಿ ಗ್ರಾಮದ ಜನರನ್ನು ಸ್ಥಳಾಂತರಿಸಲಾಗಿದೆ.
ರಿಷಿಗಂಗಾ ತಪೋವನ ಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ನಾಪತ್ತೆಯಾಗಿದ್ದು, ಅವರೆಲ್ಲ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿರಬಹುದು ಎಂದು ಶಂಕಿಸಲಾಗಿದ್ದು ಬಿಡುವಿಲ್ಲದ ರಕ್ಷಣಾ ಕಾರ್ಯ ಸ್ಥಳದಲ್ಲಿ ನಡೆಯುತ್ತಿದ್ದು ನಿರಂತರವಾಗಿ ಕೇಂದ್ರ ಸರ್ಕಾರವು ಸಂಪರ್ಕದಲ್ಲಿ ಇದ್ದು ಸಹಾಯ ಸಹಕಾರ ನೀಡುತ್ತಿದೆ.