ಧಾರವಾಡ –
ಸಿಟಿ ಆರ್ಮ್ ರಿಸರ್ವ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಧಾರವಾಡ ದಲ್ಲಿ ನಡೆದಿದೆ.ಹುಬ್ಬಳ್ಳಿ ಧಾರವಾಡ ಬೈಪಾ ಸ್ ರಸ್ತೆಯ ಇಟಿಗಟ್ಟಿ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ.ಕರ್ತವ್ಯ ಮುಗಿಸಿ ಧಾರವಾಡಕ್ಕೆ ವಾಪಸ್ಸಾ ಗುವಾಗ ಮೂವರಿಂದ ಹಲ್ಲೆಯಾಗಿದೆ.

ನಾಗೇಶ ಬ್ಯಾಟಗೇರ ಹಾಗೂ ಉದಯ ಭಂಡಾರಿ ಎಂಬ ಕಾನ್ಸ್ಟೆಬಲ್ ಗಳ ಮೇಲೆ ಹಲ್ಲೆ ನಡೆದಿದೆ. ಗಾಯಾಳುಗಳು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ

ಪ್ರಥಮ ಚಿಕತ್ಸೆಯನ್ನು ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ನೀಡಿ ಎಸ್ ಡಿಎಂ ಆಸ್ಪತ್ರೆಗೆ ರವಾನೆ

ಚೈನು ಹಾಗೂ ಹ್ಯಾಂಡ್ ಪಂಚ್ ದಿಂದ ಹಲ್ಲೆಯನ್ನು ದುಷ್ಕರ್ಮಿಗಳು ಮಾಡಿದ್ದಾರೆ.ಬೈಕ್ ಅಡ್ಡಗಟ್ಡಿ ಹಿಡಿದು ಹಲ್ಲೆ ಮಾಡಲಾಗಿದೆ.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.