ಬೆಳಗಾವಿ –
ಶಾಲೆಗೆ ಪ್ರವೇಶವನ್ನು ಪಡೆಯುವ ನೆಪದಲ್ಲಿ ಪೊನ್ ಮಾಡಿ 90 ಸಾವಿರ ರೂಪಾಯಿ ಎಗರಿಸಿದ ಘಟನೆ ಬೆಳಗಾವಿ ಯಲ್ಲಿ ನಡೆದಿದೆ.ಬೆಳಗಾವಿ ತಾಲೂಕಿನ ಶಿಂಧೊಳ್ಳಿಯ ಖಾಸಗಿ ಶಾಲಾ ಆಡಳಿತ ಮಂಡಳಿಗೆ ಈ ಒಂದು ವಂಚನೆ ನಡೆದಿದ್ದು ಬೆಳಕಿಗೆ ಬಂದಿದೆ. ಎಲ್ಕೆಜಿ ಅಡ್ಮಿಶನ್ ಬೇಕಿದೆ ಅಂತಾ ಹೇಳಿ 90 ಸಾವಿರ ರೂ. ಪಂಗನಾಮ ಹಾಕಿದ್ದಾರೆ ಖದೀಮರು.
ಯೋಧನ ಹೆಸರಿನಲ್ಲಿ ಮೊಬೈಲ್ಗೆ ಕರೆ ಮಾಡಿದ ಖದೀಮರು ಈ ಒಂದು ವಂಚನೆಯನ್ನು ಮಾಡಿದ್ದಾರೆ.ತಾನು ಜಮ್ಮು ಕಾಶ್ಮೀರದಲ್ಲಿ ವಾಸವಿದ್ದು ಮಗು ಪತ್ನಿ ಬೆಳಗಾವಿಯಲ್ಲಿ ಇದ್ದಾರೆ. ಬೆಳಗಾವಿಯಲ್ಲಿರುವ ಮಗನಿಗೆ ಎಲ್ಕೆಜಿ ಅಡ್ಮಿಶನ್ ಬೇಕಾಗಿದೆ ಎಂದು ಕರೆ ಮಾಡಿದ್ದಾರೆ.ಅಡ್ಮಿಶನ್ ಶುಲ್ಕ ಆನ್ಲೈನ್ ನಲ್ಲಿ ಪಾವತಿಸೋದಾಗಿ ನಂಬಿಸಿ ಬ್ಯಾಂಕ್ ಖಾತೆ ವಿವರ ಪಡೆದು ಈ ಒಂದು ವಂಚನೆಯನ್ನು ಮಾಡಿದ್ದಾರೆ
ವಾಟ್ಸಪ್ ಮೂಲಕ ಫೋಟೋ ಕಳಿಸಿ ನಂಬಿಸಿದ್ದ ವ್ಯಕ್ತಿ.ಖಾತೆ ಕನ್ ಫರ್ಮ್ ಮಾಡಲು 1 ರೂ. ವರ್ಗಾಯಿಸುತ್ತಿರೋದಾಗಿ ಹೇಳಿದ್ದ ಆಸಾಮಿ.ತಾನು ಆನ್ಲೈನ್ ಮೂಲಕ ಕಳಿಸಿದ 1 ರೂ. ಹಣ ಸ್ವೀಕರಿಸಿ ಖಾತೆ ಕನ್ಫರ್ಮ್ ಮಾಡಿ ಎಂದು ಕರೆ ಮಾಡಿದ್ದರು.ಇದನ್ನೇ ನಂಬಿ ವಂಚಕ ಕಳಿಸಿದ್ದ ಲಿಂಕ್ ಕ್ಲಿಕ್ ಮಾಡಿದ್ದ ಸಿಬ್ಬಂದಿ.ಬಳಿಕ ಅದೇ ಖಾತೆಯಿಂದಲೇ 90 ಸಾವಿರ ರೂ. ವರ್ಗಾವಣೆ ಮಾಡಿಕೊಂಡಿದ್ದ ವಂಚಕ.ವಿಷಯ ತಿಳಿಯುತ್ತಿದ್ದಂತೆ ಶಾಲಾ ಆಡಳಿತ ಮಂಡಳಿಯಿಂದ ದೂರು ದಾಖಲಾಗಿದೆ.ಬೆಳಗಾವಿಯ ಸಿಇಎನ್ ಪೊಲೀಸ್ ಠಾಣೆಗೆ ಶಾಲಾ ಆಡಳಿತ ಮಂಡಳಿ ದೂರು ದಾಖಲು ಮಾಡಿದೆ.ಸಧ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಸಿಇಎನ್ ಪೊಲೀಸರು.ಶಾಲಾ ಆಡಳಿತ ಮಂಡಳಿಗಳನ್ನು ಬಿಡುತ್ತಿಲ್ಲ ಸೈಬರ್ ವಂಚಕರು. ಶಾಲಾ ಆಡಳಿತ ಮಂಡಳಿಯ ಬ್ಯಾಂಕ್ ಖಾತೆಗೆ ಕನ್ನ ಹಾಕಿದ್ದಾರೆ ಖದೀಮರು.ದಯಮಾಡಿ ಶಿಕ್ಷಕ ಬಂಧುಗಳೇ ಇದು ವಂಚನೆಯ ಮತ್ತೊಂದು ಮುಖ ವಾಡವಾಗಿದ್ದು ದಯಮಾಡಿ ಹುಷಾರಾಗಿರಿ ಯಾರಾದರೂ ನಾವು ಅವರು ಇವರು ಹಾಗೇ ಹೀಗೆ ಅಂತಾ ಹೇಳಿದರೆ ಅವರಿಗೆ ನಿಮ್ಮ ಖಾತೆಯ ಯಾವುದೇ ಮಾಹಿತಿಯನ್ನು ಕೊಡಬೇಡಿ ಇದು ನಿಮ್ಮ ಸುದ್ದಿ ಸಂತೆ ಯ ಕಾಳಜಿ ಕಳಕಳಿಯ ವಿನಂತಿ