ಹುಬ್ಬಳ್ಳಿ –
ವೈದ್ಯರ ನಿರ್ಲಕ್ಷದಿಂದ ಬಾಣಂತಿ ಮಹಿಳೆಯೊಬ್ಬಳು ಸಾವನ್ನಪ್ಪಿರುವ ಆರೋಪವೊಂದು ಧಾರವಾಡದ ಕಲಘ ಟಗಿಯಲ್ಲಿ ಕಂಡು ಬಂದಿದೆ.ಹೌದು ಗರ್ಭಿಣಿ ಮಹಿಳೆ ಪಾರ್ವತಿ ಅವರು ಹೆರಿಗೆ ಅಂದು ಕಲಘಟಗಿ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಗೆ ಬಂದಿದ್ದು ವೈದ್ಯರ ನಿರ್ಲಕ್ಷ್ಯ ದಿಂದಾಗಿ ಇವರು ಮೃತರಾಗಿದ್ದಾರೆ ಎಂದು ಆಸ್ಪತ್ರೆಯ ಎದುರು ಮೃತದೇಹ ಇಟ್ಟು ಪ್ರತಿಭಟನೆ ಮಾಡಿದರು
ಶಿಗ್ಗಟ್ಟಿ ತಾಂಡಾದ ಪಾರ್ವತಿ ಲಮಾಣಿ (26) ಮೃತ ಬಾಣಂತಿ ಮಹಿಳೆಯಾಗಿದ್ದು ಹೆರಿಗೆಗೆಂದು ನಿನ್ನೆ ರಾತ್ರಿ ಕಲಘಟಗಿ ತಾಲ್ಲೂಕಾ ಆಸ್ಪತ್ರೆಗೆ ಬಂದಿದ್ದರು.ಹೆರಿಗೆ ವೇಳೆ ಮಗು ಮೃತಪಟ್ಟಿತ್ತು ತಾಯಿಗೆ ಸೂಕ್ತ ಚಿಕಿತ್ಸೆ ನೀಡದ ವೈದ್ಯರು ಅಂತಾ ಪಾರ್ವತಿ ಕುಟುಂಬಸ್ಥರು ಆರೋಪವನ್ನು ಮಾಡಿದ್ದಾರೆ.
ಪಾರ್ವತಿಯನ್ನು ಹುಬ್ಬಳ್ಳಿ ಕಿಮ್ಸ್‌ಗೆ ಕರೆದೊಯ್ಯಲು ತಿಳಿಸಿದ್ದ ವೈದ್ಯರು.ಕಿಮ್ಸ್ ತಲುಪುವಷ್ಟರಲ್ಲಿಮೃತಪಟ್ಟಿದ್ದಾರೆ ಪಾರ್ವತಿ.ಹೀಗಾಗಿ ಕಲಘಟಗಿ ಆಸ್ಪತ್ರೆ ಮುಂದೆ ಮೃತದೇಹ ವಿಟ್ಟು ಪ್ರತಿಭಟನೆ ನಡೆಸಿದರು ಮೃತಳ ಸಂಬಂಧಿಕರು ಇನ್ನೂ ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಸಂತೈಸಲು ಯತ್ನಿಸಿದರು ಶಾಸಕ ಸಿ.ಎಮ್. ನಿಂಬಣ್ಣವರ್ ನಿರ್ಲಕ್ಷ ವಹಿಸಿದ ವೈದ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರತಿಭಟನಾ ನಿರತರ ಆಗ್ರಹವನ್ನು ಮಾಡಿದರು.