ಹುಬ್ಬಳ್ಳಿ –
ಸಾಲಬಾಧೆಗೆ ಬೇಸತ್ತು ರೈತನೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದ ಅಣ್ಣಿಗೇರಿಯಲ್ಲಿ ನಡೆದಿದೆ. ಅಣ್ಣಿಗೇರಿಯ ಕಾಲವಾಡ ಗ್ರಾಮದಲ್ಲಿನ ರೈತ ಹೇಮರಡ್ಡಿ ನಿಂಗಪ್ಪ ಲಿಂಗರಡ್ಡಿ ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ. ಮೃತ ರೈತನಿಗೆ ಜಮೀನು ಇದ್ದರು ಕಳೆದ ಎರಡು ವರುಷಗಳಿಂದ ಜಮೀನಿನಲ್ಲಿ ಸರಿಯಾಗಿ ಬೆಳೆ ಬಂದಿರಲಿಲ್ಲವಂತೆ ಅಲ್ಲದೇ ಇತ್ತಿಚಿಗೆ ಕೈಗಡ ಸಾಲ ಮಾಡಿಕೊಂಡು ಬೆಳೆದಿದ್ದ ಹತ್ತಿ ಬೆಳೆ ಕೂಡಾ ಕೈಕೊಟ್ಟಿತಂತೆ.

ಈ ಒಂದು ಹಿನ್ನಲೆಯಲ್ಲಿ ಬೇಸತ್ತ ರೈತ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಇನ್ನೂ ಅರೇ ಕುರಹಟ್ಟಿ ಗ್ರಾಮದ ಕೆವಿಜಿ ಬ್ಯಾಂಕ್ ನಲ್ಲಿ ಒಂದೂವರೆ ಲಕ್ಷ ರೂಪಾಯಿ ಸಾಲವನ್ನು ಮಾಡಿಕೊಂಡಿದ್ದನು ರೈತ.ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ರೈತ . ಅಣ್ಣಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. +