ಕುಂದಗೋಳ –
ಹೌದು ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಅಲ್ಲಾಪೂರ ಗ್ರಾಮದ ಸರ್ಕಾರಿ ಶಾಲೆಯ ಗೋಡೆಯ ಮೇಲೆ ಹುಬ್ಬಳ್ಳಿ ಧಾರವಾಡ ಮಧ್ಯದಲ್ಲಿ ಸಂಚರಿಸುತ್ತಿರುವ ಚಿಗರಿ ಬಸ್ ನ್ನು ಅಲಂಕಾರ ಮಾಡಿ ಬಿಡಿಸಿದರು.ಗ್ರಾಮ ಪಂಚಾಯತ ಸದಸ್ಯರಾದ ಮಲ್ಲಿಕಾರ್ಜುನ ರಡ್ಡೇರ ಅವರ ವಿಶೇಷವಾದ ಈ ಒಂದು ಕಾರ್ಯವನ್ನು ಗಮನಿಸಿದ ಬಿಆರ್ ಟಿಎಸ್ ಅಧಿಕಾರಿಗಳು ಚಿಗರಿ ಬಸ್ ನ್ನು ಸರ್ಕಾರಿ ಶಾಲೆಯ ಗೋಡೆ ಮೇಲೆ ಚಿತ್ರಿಸಿದ್ದಕ್ಕಾಗಿ ಹಾಗೇ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಅಲ್ಲಾಪೂರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಎಸ್ ಡಿ ಎಮ್ ಸಿ ಅವರಿಗೆ ಗ್ರಾಮ ಪಂಚಾಯತ್ ಸದಸ್ಯರಿಗೆ ಒಂದು ದಿನದ ಉಚಿತವಾಗಿ ಹುಬ್ಬಳ್ಳಿ ಧಾರವಾಡ BRTS ಚಿಗರಿ ಬಸ್ ನಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ಅವಕಾಶ ಮಾಡಿಕೊಟ್ಟರು.
ಹೌದು NWKSRTC MD ವ್ಯವಸ್ಥಾಪಕ ನಿರ್ದೇಶಕರಾದ ಗುರುದತ್ತ ಹೆಗಡೆ ಮತ್ತು BRTS DC ವಿವೇಕಾನಂದ ವಿಶ್ವಜ್ಞ ಹಾಗೂ BRTS ಚಿಗರಿ ಬಸ್ ಸಂಸ್ಥೆ ಎಲ್ಲಾ ಅಧಿ ಕಾರಿಗಳು ಪ್ರವಾಸದ ಭಾಗ್ಯವನ್ನು ಒದಗಿಸಿಕೊಟ್ಟರು ಹೀಗಾಗಿ ಅಲ್ಲಾಪೂರ ಗ್ರಾಮದ ಶಾಲಾ ಮಕ್ಕಳು ಒಂದು ದಿನ ಚಿಗರಿ ಬಸ್ ನ ಕಾರ್ಯ ಕುರಿತಂತೆ ಪ್ರವಾಸವನ್ನು ಮಾಡಿದರು.
ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ನೇತ್ರತ್ವದಲ್ಲಿ ಶಾಲಾ ಮಕ್ಕಳಿಗೆ ಚಿಗರಿ ಬಸ್ ಕುರಿತಂತೆ ಎಲ್ಲವನ್ನೂ ಸಂಪೂರ್ಣವಾಗಿ ತಿಳಿಸಿಕೊಡಲಾಯಿತು. ಇನ್ನೂ ಇದರೊಂದಿಗೆ ಅವಳಿ ನಗರದ ಮಧ್ಯದಲ್ಲಿ ಒಂದು ಸುತ್ತು ಟ್ರೀಪ್ ಮಾಡಿದರು ಶಾಲಾ ಮಕ್ಕಳು ಮತ್ತು ಎಸ್ ಡಿ ಎಮ್ ಸಿ ಸದಸ್ಯರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮತ್ತು ಎಸ್ ಡಿ ಎಮ್ ಸಿ ಅಧ್ಯಕ್ಷರು ಗ್ರಾಮ ಪಂಚಾಯತ್ ಸದಸ್ಯರು ಹುಬ್ಬಳ್ಳಿ ಧಾರವಾಡ BRTS ಸಂಸ್ಥೆಯ ಚಿಗರಿ ಬಸ್ ನಲ್ಲಿ ಶಾಲೆಯು ಮಕ್ಕಳು ಒಂದು ದಿನದ ಶೈಕ್ಷಣಿಕ ಪ್ರವಾಸಕ್ಕೆ ಹೋಗಿದ್ದ ಅದ್ಭುತ ಕ್ಷಣಗಳು BRTS ಚಿಗರಿ ಬಸ್ ಸಂಸ್ಥೆಯ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಮಲ್ಲಿಕಾರ್ಜುನ ರಡ್ಡೇರ ಅವರಿಗೆ ಸವಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು
ನಂತರ ಶಾಲೆಯ ಮುಖ್ಯೋಪಾಧ್ಯಾಯರಾದ ಜಾನಕಿ ಉಪಾಧ್ಯಾಯ ಅವರಿಗೂ ಸವಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು ಈ ಸಂದರ್ಭದಲ್ಲಿ BRTC ಚಿಗರಿ ಬಸ್ ಸಂಸ್ಥೆಯ MD DC PRO ಮತ್ತು ಅಧಿಕಾರಿಗಳು ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರು ಶಾಲಾ ಮಕ್ಕಳು ಉಪಸ್ಥಿತರಿ ದ್ದರು.ಇದೇ ವೇಳೆ ಈ ಒಂದು ಅವಕಾಶವನ್ನು ಒಧಗಿಸಿ ಕೊಟ್ಟ ಹಿನ್ನಲೆಯಲ್ಲಿ ಗ್ರಾಮಸ್ಥರು ಇಲಾಖೆಯ ಅಧಿಕಾರಿ ಗಳಿಗೆ ಧನ್ಯವಾದಗಳನ್ನು ಹೇಳಿದರು.