ಧಾರವಾಡ –
ಪಂಚಮಸಾಲಿ ಸಮಾಜವನ್ನು ರಾಜ್ಯಸರ್ಕಾರ 2 ಎ ಹಾಗೂ ಲಿಂಗಾಯತ ಬಡ ಉಪ ಸಮಾಜಗಳನ್ನು ಕೇಂದ್ರಸರ್ಕಾರದ ಒಬಿಸಿ ಮೀಸಲಾತಿಗೆ ಸೇರ್ಪಡಿಸುವಂತೆ ಹಕ್ಕೊತ್ತಾಯಿಸಿ ಜನವರಿ 14 ರಂದು ಗುರುವಾರ ಸಂಕ್ರಾಂತಿ ದಿನದಂದು ಕೂಡಲಸಂಗಮದ ಲಿಂಗಾಯತರ ಧಾರ್ಮಿಕ ಪೀಠದಿಂದ ಬೆಂಗಳೂರಿನ ವಿಧಾನಸೌಧದ ಆಡಳಿತ ಪೀಠದವರೆಗೆ ಪಂಚಲಕ್ಷ ಹೆಜ್ಜೆಗಳ ಐತಿಹಾಸಿಕ ಬೃಹತ್ ಪಾದಯಾತ್ರೆ ನಡೆಯಲಿದೆ.
ಈ ಒಂದು ಪಾದಯಾತ್ರೆ ಪೂರ್ವಭಾವಿಯಾಗಿ ಧಾರವಾಡದಲ್ಲಿ ಈ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಧಾರವಾಡ ಜಿಲ್ಲಾ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಚೆನ್ನಮ್ಮನ ಬಳಗ ಮಹಿಳಾ ಘಟಕದ ಅಧ್ಯಕ್ಷರಾಗಿರುವ ದೀಪಾ ನಾಗರಾಜ್ ಗೌರಿ ಹೇಳಿದ್ದಾರೆ.

ಇನ್ನೂ ಈ ಪೂರ್ವ ಭಾವಿ ಸಭೆಗೆ ಸಮಾಜದ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ದೀಪಾ ನಾಗರಾಜ ಗೌರಿ ಪತ್ರಿಕಾ ಪ್ರಕಟಣೆ ಮೂಲಕ ಕೆರೆ ನೀಡಿದ್ದಾರೆ.

ಕೂಡಲಸಂಗಮದ ಲಿಂಗಾಯತರ ಧಾರ್ಮಿಕ ಪೀಠದಿಂದ ಬೆಂಗಳೂರಿನ ವಿಧಾನಸೌಧದ ಆಡಳಿತ ಪೀಠದವರೆಗೆ ಪಂಚಲಕ್ಷ ಹೆಜ್ಜೆಗಳ ಐತಿಹಾಸಿಕ ಬೃಹತ್ ಪಾದಯಾತ್ರೆ ನಡೆಯಲಿದೆ.
ಸಭೆ ನಡೆಯುವ ಸ್ಥಳ ಜನವರಿ 2 ರಂದು ಶನಿವಾರ ಮಧ್ಯಾಹ್ನ 3 ಗಂಟೆಗೆ ಸ್ಥಳ ಲಿಂಗಾಯತ ಭವನ ಚನ್ನಬಸವೇಶ್ವರ ನಗರ, ಧಾರವಾಡ