ಹುಬ್ಬಳ್ಳಿ –
ಶಾಸಕ ಪ್ರಸಾದ್ ಅಬ್ಬಯ್ಯ ರಿಂದ ಲ್ಯಾಪ್ ಟಾಪ್ ವಿತರಣೆ – ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿದ ಶಾಸಕರು ಪಾಲಿಕೆ ಅಧಿಕಾರಿಗಳು ಉಪಸ್ಥಿತಿ
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಲ್ಯಾಪ್ ಟಾಪ್ ವಿತರಿಸಿದರು.ಹೌದು ಹುಬ್ಬಳ್ಳಿ ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಬರುವ ಪೂರ್ವ ವಿಧಾನಸಭಾ ಮತಕ್ಷೇತ್ರದ ಪರಿಶಿಷ್ಟ ಜಾತಿಯ ಬಿ ಇ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಎಂ ಜಿ ಎನ್ ವಿ ವೈ ಯೋಜನೆಯಡಿ ಲ್ಯಾಪ್ ಟಾಪ್ ಗಳನ್ನು ವಿತರಿಸಲಾಯಿತು.ಯೋಜನೆಯಲ್ಲಿ ಮಂಜೂರಾಗಿ ಯೋಜನೆಯಡಿ ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳಾದ
ನವೀನ್ ಹುಬ್ಬಳ್ಳಿ ,ಕೀರ್ತನ ಕುಂದಗೋಳ, ಚಿತ್ರ ಸೇನಾ ಘೋಡ್ಕೆ, ಹಾಗೂ ಪೌರಕಾರ್ಮಿಕರಾಗಿ ಕಾರ್ಯನಿರ್ವಹಿ ಸುತ್ತಿರುವ ಸಿಬ್ಬಂದಿಗಳ ಮಕ್ಕಳಾದ ತರುಣ್ ಅರವೇಡ , ರಾಹುಲ್ ಬೆವೂರ ಇವರಿಗೆ ಶಾಸಕರಾದ ಪ್ರಸಾದ್ ಅಬ್ಬಯ್ಯ ಲ್ಯಾಪ್ ಟಾಪ್ ವಿತರಿಸಿದರು. ಈ ಸಂದರ್ಭ ದಲ್ಲಿ ಪಾಲಿಕೆಯ ವಲಯ ಕಚೇರಿ ಸಹಾಯಕ ಆಯುಕ್ತ ರಾದ ಗಿರೀಶ್ ತಳವಾರ್, ಹಾಗೂ ಸಿಬ್ಬಂದಿಗಳಾದ ಮಹೇಂದ್ರಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..