ಧಾರವಾಡ –
ಬಾಕಿ ಶಾಲಾ ಶುಲ್ಕ ಶಿಕ್ಷಕರ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಡಿಸೆಂಬರ್ 2 ರಂದು ಪ್ರತಿಭಟನೆ ಮಾಡಲಾಗುತ್ತದೆ. ಅನುದಾನರಹಿತ ಖಾಸಗಿ ಶಾಲಾ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಶಂಕರ ಹಲಗತ್ತಿ ಹೇಳಿದ್ದಾರೆ. ಧಾರವಾಡದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಶಿಕ್ಷಣ ಸಚಿವರು ದಿನಕ್ಕೊಂದ ಹೇಳಿಕೆ ನೀಡುತ್ತಾ ಅನುದಾನರಹಿತ ಖಾಸಗಿ ಶಾಲೆಗಳ ಶಿಕ್ಷಕರ, ವಿದ್ಯಾರ್ಥಿಗಳ ಹಾಗೂ ಪೋಷಕರನ್ನು ಗೊಂದಲ ಉಂಟು ಮಾಡಿದ್ದಾರೆ.
ಖಾಸಗಿ ಶಾಲೆಗಳೆಂದರೆ ಬರಿ ಬೆಂಗಳೂರಿನ ಶಾಲೆಗಳು ಮಾತ್ರ ಅಲ್ಲ, ಉತ್ತರ ಕರ್ನಾಟಕದಲ್ಲಿಯೂ ಇವೆ. ಇಲ್ಲಿನ ಅನುದಾನರಹಿತ ಶಾಲೆಗಳಲ್ಲಿ ಹಲವಾರು ಸಮಸ್ಯೆಗಳಿವೆ, ಅದ್ಯಾವುದನ್ನು ಲೆಕ್ಕಿಸದೇ ಶಿಕ್ಷಣ ಸಚಿವರು ದಿನಕ್ಕೊಂದು ಹೇಳಿಕೆ ನೀಡುತ್ತಾ ಬರುತ್ತಿವುದು ತಪ್ಪು, ಪೋಷಕರು ಶುಲ್ಕ ಕಟ್ಟಲು ಮುಂದಿದ್ದಾರೆ ಆದ್ರೆ ಶಿಕ್ಷಣ ಸಚಿವರ ಹೇಳಿಕೆ ಇಂದ ಹಿಂದೆಟು ಹಾಕುತ್ತಿದ್ದಾರೆ. ನಾವೇಲ್ಲ ಶಿಕ್ಷಕರಿಗೆ ವೇತನ ನೀಡಬೇಕು, ಶಾಲೆ ಟ್ಯಾಕ್ಸ್, ಬಾಡಿಗೆ, ವಿದ್ಯುತ್ ಬಿಲ್ ಸೇರಿದಂತೆ ಹಲವು ಸಮಸ್ಯೆಗಳಿಗೆ ಈ ಸಮಸ್ಯೆಗಳಿದ್ದು ಎಲ್ಲವನ್ನು ಬಗೆಹರಿಸಬೇಕಿದೆ.ಈ ಹಿನ್ನಲೆಯಲ್ಲಿ ಧಾರವಾಡದ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಎದುರು ಉತ್ತರ ಕರ್ನಾಟಕದ ಅನುದಾನರಹಿತ ಶಾಲೆಯ ಎಲ್ಲ ಸಿಬ್ಬಂದಿಗಳು ಡಿ.2 ರಂದು ಒಂದು ದಿನ ಸಾಂಕೇತಿತ ಧರಣಿ ಹಮ್ಮಿಕೊಂಡಿದ್ದೆವೆ. ನಮ್ಮ ಬೇಡಿಕೆ ಈಡೇರದೇ ಹೋದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಶಂಕರ ಹಲಗತ್ತಿ ಹೇಳಿದರು.