ಹುಬ್ಬಳ್ಳಿ –
ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಶಿಕ್ಷಕ ರೆಂದು ಪದನಾಮ ಬದಲಾವಣೆ ಮಾಡಬೇಕು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಕೇವಲ 1 ರಿಂದ 5 ನೇ ತರಗತಿಗೆ ಬೋಧಿಸುವ ಶಿಕ್ಷಕರು ಎಂದು ಪರಿಗಣಿಸಿದ ಹಿನ್ನಲೆಯಲ್ಲಿ ಜುಲೈ 5 ರಂದು ವಿಕಲ ಚೇತನ ನೌಕರರ ಸಂಘ ಹಾಗೂ ಪದವೀಧರ ಶಿಕ್ಷಕರ ಸಂಘದ ವತಿಯಿಂದ ಶಾಲೆಯಲ್ಲಿ ಕಪ್ಪು ಬಟ್ಟೆಯನ್ನು ಕಟ್ಟಿಕೊಂಡು ಕೆಲಸ ಮಾಡುವುದರ ಜೊತೆಯಲ್ಲಿ 6 ರಿಂದ 8 ನೇ ತರಗತಿಯನ್ನು ಬೋಧನೆ ಮಾಡುವುದನ್ನು ಬಹಿಷ್ಕಾರ ಹಾಕುವ ಮನವಿ ಪತ್ರವನ್ನು ಶಾಲೆಯನ್ನು ಮುಖ್ಯೋಪಾಧ್ಯಾ ಯರಿಗೆ ಹಾಗೂ ತಾಲ್ಲೂಕಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗಳಿಗೆ ಮನವಿ ಪತ್ರ ನೀಡುವ ಕಾರ್ಯವನ್ನು ಹಮ್ಮಿ ಕೊಂಡಿದ್ದ ಈ ಒಂದು ಕಾರ್ಯದಲ್ಲಿ ಪ್ರತಿಯೊಬ್ಬ ಪ್ರಾಥಮಿಕ ಶಾಲಾ ಶಿಕ್ಷಕ ಭಾಗವಹಿಸುವುದರ ಮೂಲಕ ನಮ್ಮ ಹಕ್ಕನ್ನು ಪಡೆದುಕೊಳ್ಳಬೇಕಿದೆ ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾ ಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಮನವಿ ಮಾಡಿದ್ದಾರೆ.