ನವದೆಹಲಿ –
ಕೊರೊನಾದ ಮೂರನೇ ಅಲೆಯ ಆತಂಕದಲ್ಲಿ ಇಡೀ ದೇಶ ಇದೆ.ಇದೀಗ ಪಂಜಾಬ್ ಲೂಧಿಯಾನ ದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಲೂಧಿಯಾನದಲ್ಲಿರುವ ಎರಡು ಶಾಲೆಗಳಲ್ಲಿ 20 ಮಕ್ಕಳಲ್ಲಿ ಕೊರೊನಾ ಕಾಣಿಸಿಕೊಂಡಿದೆ ಅಂತಾ ಡೆಪ್ಯೂಟಿ ಕಮಿಷನರ್ ವಿಕೆ ಶರ್ಮಾ ಮಾಹಿತಿ ನೀಡಿದ್ದಾರೆ.
ಸರ್ಕಾರದ ಆದೇಶದಂತೆ ಜುಲೈ 26 ರಿಂದ ಪಂಜಾಬ್ ನಲ್ಲಿ ಶಾಲಾ-ಕಾಲೇಜುಗಳು ಶುರುವಾ ಗಿವೆ. ಇದೀಗ 20 ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರೋದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಮತ್ತೆ ಶಾಲೆಗಳನ್ನು ಬಂದ್ ಮಾಡಲಾಗು ತ್ತದೆ ಅನ್ನೋ ಮಾತುಗಳು ಕೇಳಿಬಂದಿವೆ.
ಇನ್ನು 20 ಮಕ್ಕಳಿಗೆ ಕೊರೊನಾ ಸೋಂಕು ತಗುಲಿ ರೋದು ಪಕ್ಕಾ ಆಗುತ್ತಿದ್ದಂತೆ ಪಂಜಾಬ್ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ಮಕ್ಕಳ ಜೊತೆ ಆಟವಾಡಬೇಡಿ ಶಾಲೆಗಳನ್ನ ಬಂದ್ ಮಾಡಿ, ಆನ್ ಲೈನ್ ಕ್ಲಾಸ್ ಶುರುಮಾಡಿ ಅನ್ನೋ ಆಗ್ರಹ ಗಳು ಕೇಳಿಬಂದಿವೆ.ಇನ್ನು ಮೂರನೇ ಅಲೇ ವಿಶೇಷ ವಾಗಿ ಮಕ್ಕಳ ಮೇಲೆಯೇ ಸವಾರಿ ಮಾಡಲಿದೆ ಅಂತಾ ತಜ್ಞರು ಎಚ್ಚರಿಕೆಯನ್ನ ನೀಡಿದ್ದಾರೆ. ಹೀಗಾಗಿ ಪೋಷಕರು ಮಕ್ಕಳನ್ನ ಶಾಲೆಗೆ ಕಳುಹಿಸಲು ಹಿಂದೇ ಟು ಹಾಕುತ್ತಿದ್ದಾರೆ ಇದರ ಮಧ್ಯೆ ಕೆಲವು ರಾಜ್ಯಗಳು ಶಾಲೆಗಳನ್ನು ಆರಂಭಿಸಿದ್ದು ಏನೇನಾಗಲಿದೆ ಎಂಬು ದನ್ನು ಕಾದು ನೋಡಬೇಕು.