ಬೆಂಗಳೂರು –
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸೆಪ್ಟೆಂಬರ್ 30 ರ ವರೆಗೆ ರಾಜ್ಯಮಟ್ಟದ ಪೋಷಣ್ ಅಭಿಯಾನ ಮಾಸಾಚರಣೆ-2022 ಕೈಗೊಂಡಿದ್ದು ಈ ಒಂದು ನಿಟ್ಟಿನಲ್ಲಿ ಬೆಂಗಳೂರಿನ ಮಡಿವಾಳದ ಸ್ತ್ರೀಶಕ್ತಿ ಭವನದಲ್ಲಿ ಹಮ್ಮಿಕೊಂಡಿದ್ದ ಮಾಸಾಚರಣೆಗೆ ಸಚಿವ ಹಾಲಪ್ಪ ಆಚಾರ ಚಾಲನೆ ನೀಡಿದರು.ಹೌದು ನಗರದ ಮಡಿವಾಳದಲ್ಲಿನ ಶಕ್ತಿ ಭವನದಲ್ಲಿ ಈ ಒಂದು ಕಾರ್ಯ ಕ್ರಮವನ್ನು ಇಲಾಖೆಯ ವತಿಯಿಂದಾಗಿ ಹಮ್ಮಿಕೊಳ್ಳಲಾ ಗಿತ್ತು.
ಸಚಿವರು ಸ್ಥಳೀಯ ಜನಪ್ರತಿನಿಧಿಗಳೊಂದಿಗ ಈ ಒಂದು ವಿಶೇಷ ಮಾಸಾಚರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದರು.ರಾಜ್ಯದಲ್ಲಿ 6 ವರ್ಷದೊಳಗಿನ ಮಕ್ಕಳ ಅಪೌಷ್ಟಿಕತೆ ಪ್ರಮಾಣ 3 ವರ್ಷಗಳಿಗೆ ಹೋಲಿಸಿದರೆ 0.30% ರಿಂದ 0.17% ಗೆ ಇಳಿಕೆಯಾಗಿದೆ. ಈ ಪ್ರಮಾಣವನ್ನು ಮತ್ತಷ್ಟು ಇಳಿಸಲು ಈ ಒಂದು ವಿಶೇಷ ಅಭಿಯಾನವು ನೆರವಾ ಗಲಿದೆ.
ಇದೇ ವೇಳೆ ಕೊಳೆಗೇರಿಯ ಅಂಗನವಾಡಿ ಮಕ್ಕಳಿಗಾಗಿ ಬಿಬಿಎಂಪಿ ಸಹಯೋಗದಲ್ಲಿ, 10 ಬಸ್‌ಗಳಲ್ಲಿ ಮಾಂಟೆಸ್ಸರಿ ಆನ್ ವೀಲ್ಸ್ ಸೇವೆಗೆ ಚಾಲನೆ ದೊರೆಯಿತು ಇದೇ ವೇಳೆ ಸಚಿವರು ಇವುಗಳನ್ನು ವೀಕ್ಷಣೆ ಮಾಡಿದರು
ಮಾಜಿ ಸಚಿವರಾದ ರಾಮಲಿಂಗ ರಡ್ಡಿ,ಮಾಜಿ ಮೇಯರ್ ಮಂಜುನಾಥ ರೆಡ್ಡಿ,ಸಚಿವರ ಓಎಸ್ ಡಿ ಕನಕರಡ್ಡಿ ಅವರು ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.