ಹಾಸನ –
ಕರೋನದ ನಡುವೆಯೂ ಹಾಸನಾಂಬೆಯ ದೇಗುಲದ ದರ್ಶನಕ್ಕೇ ತೆರೆ ಬಿದ್ದಿದೆ. ಒಂದು ಕಡೆ ಕಾಣಿಕೆಯಲ್ಲೂ ಹಣ ಕಡಿಮೆ ಸಂಗ್ರವಾದರೆ ಇದಕ್ಕೂ ವಿಚಿತ್ರವಾಗಿ ಕಾಣಿಕೆ ಪೆಟ್ಟಿಗೆಯಲ್ಲಿ ಭಕ್ತರು ಹಲವಾರು ಬೇಡಿಕೆಗಳ ಈಡೇರಿಕೆಗೆ ಪತ್ರಗಳನ್ನು ಬರೆದು ಹಾಕಿದ್ದಾರೆ. ಕೆಲವರು ಉದ್ಯೋಗ ಕೊಡಿಸು ತಾಯೆ ಎಂದು ಬೇಡಿಕೊಂಡಿದ್ದರೆ, ಮತ್ತೆ ಕೆಲವರು ಸಂಸಾರ ಸರಿ ಮಾಡು, ಗಂಡ ಕುಡಿಯುವುದನ್ನು ಬಿಡಿಸು, ಕೊರೊನಾ ದೂರವಾಗಿಸು. ಆರ್ಥಿಕ ಸಮಸ್ಯೆ ಸರಿಪಡಿಸು, ಸ್ವಂತ ಮನೆ ಕಟ್ಟುವಂತೆ ಮಾಡು ಎಂದೆಲ್ಲಾ ಬೇಡಿಕೊಂಡಿದ್ದಾರೆ.
ಹೌದು ನಾಡಿನ ಪ್ರಸಿದ್ದ ಐತಿಹಾಸಿಕ ದೇವಸ್ಥಾನಗಳಲ್ಲಿ ಹಾಸನದ ಅಧಿದೇವತೆ ಹಾಸನಾಂಬೆ ಕೂಡಾ ಒಂದು. ಪ್ರತಿ ವರುಷಕ್ಕೊಮ್ಮೆ ನಡೆಯುವ ಹಾಸನಾಂಬೆಯ ಜಾತ್ರೆ ಅದ್ದೂರಿಯಾಗಿ ನಡೆಯುತ್ತದೆ. ಕರೋನಾದ ನಡುವೆಯೂ ಕೂಡಾ ಈ ವರುಷದ ಜಾತ್ರಾ ಮಹೋತ್ಸವಕ್ಕೆ ಅವಕಾಶ ನೀಡಲಾಗಿತ್ತು. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸಾರ್ವಜನಿಕ ದರ್ಶನಕ್ಕೆ ನಿರ್ಬಂಧ ಹೇರಿದ್ದರಿಂದ ಕಾಣಿಕೆ ರೂಪದಲ್ಲಿ ಸಂಗ್ರಹವಾಗುತ್ತಿದ್ದ ಆದಾಯದ ಪ್ರಮಾಣದಲ್ಲಿ ಗಣನೀಯವಾಗಿ ಇಳಿಕೆಯಾಗಿದೆ.ದೇವಾಲಯದ ಆವರಣದಲ್ಲಿ ನಡೆದ ನಡೆದ 10 ಹುಂಡಿಗಳ ಎಣಿಕೆ ನಂತರ ಒಟ್ಟಾರೆ 22 ಲಕ್ಷದ 77 ಸಾವಿರದ 772 ರೂ. ಸಂಗ್ರಹವಾಗಿದೆ.ಕಳೆದ ವರುಸದ ಸಂಗ್ರಹವನ್ನು ನೋಡಿದ್ರೆ ಈಬಾರಿ ದೇಣಿಗೆಯಲ್ಲಿ ಭಾರಿ ಪ್ರಮಾಣದಲ್ಲಿ ಕಡಿಮೆ ಕಂಡು ಬಂದಿದೆ.ಇನ್ನೂ ಇದು ಒಂದು ಕಡೆಯಾದ್ರೆ ಇನ್ನೂ ಇದಕ್ಕೂ ಮತ್ತೊಂದು ಗಮನಾರ್ಹ ಸಂಗತಿ ಎಂದರೆ ಭಕ್ತರ ಬರೆದ ವಿವಿಧ ಬೇಡಿಕೆಗಳ ಪತ್ರ.ಹತ್ತು ಹಲವಾರು ಸೇರಿದಂತೆ ವಿವಿಧ ಕೋರಿಕೆ ಈಡೇರಿಸು ತಾಯಿ ಎಂದು ಹತ್ತಾರು ಪತ್ರಗಳನ್ನು ಭಕ್ತರು ಬರೆದು ಪೆಟ್ಟಿಗೆ ಹಾಕಿದ್ದು ಕಂಡು ಬಂದಿವೆ.
ಮುಖ್ಯವಾಗಿ ಕೆಲವರು ಉದ್ಯೋಗ ಕೊಡಿಸು ತಾಯೆ ಎಂದು ಬೇಡಿಕೊಂಡಿದ್ದರೆ ಮತ್ತೆ ಕೆಲವರು ಸಂಸಾರ ಸರಿ ಮಾಡು, ಗಂಡ ಕುಡಿಯುವುದನ್ನು ಬಿಡಿಸು, ನಮ್ಮನ್ನು ಜನರನ್ನು ದೇಶವನ್ನು ಅತಿಯಾಗಿ ಬಿಟ್ಟು ಬಿಡಲಾರದೇ ಕಾಡುತ್ತಿರುವ ಕೊರೊನಾವನ್ನು ದೂರವಾಗಿಸು. ಆರ್ಥಿಕ ಸಮಸ್ಯೆ ಸರಿಪಡಿಸು, ಸ್ವಂತ ಮನೆ ಕಟ್ಟುವಂತೆ ಮಾಡು ಇದರೊಂದಿಗೆ ಇನ್ನೂ ಕೆಲವು ಬೇಡಿಕೆಗಳನ್ನು ಈಡೇರಿಸುಂತೆ ಬೇಡಿಕೊಂಡು ತಾಯಿಯ ಹೆಸರಿಗೆ ಭಕ್ತರು ಪತ್ರಗಳನ್ನು ಬರೆದು ಹುಂಡಿಗೆ ಹಾಕಿದ್ದಾರೆ. ತಾವು ಅಂದುಕೊಂಡಿದ್ದು ಬೇಡಿಕೊಳ್ಳೊದನ್ನು ಎಂದೆಲ್ಲಾ ಬೇಡಿಕೊಂಡು ಪತ್ರಗಳನ್ನು ಬರೆದು ತಾಯಿಯ ಹೆಸರಿನಲ್ಲಿ ಕಾಣಿಕೆಯ ಹುಂಡಿಗೆ ಭಕ್ತರು ಬರೆದು ಹಾಕಿದ್ದಾರೆ.
ಕಳೆದ ನವೆಂಬರ್ 5 ರಿಂದ 16 ರವರೆಗೆ ನಡೆದ ಹಾಸನದ ಅಧಿದೇವತೆ ಹಾಸನಾಂಬೆಯ ಜಾತ್ರಾ ಮಹೋತ್ಸವ ವೇಳೆ ಸಂಗ್ರಹವಾದ ಹುಂಡಿ ಎಣಿಕೆ ಕಾರ್ಯ ಇಂದು ದೇವಾಲಯದ ಆವರಣದಲ್ಲಿ ನಡೆಯಿತು. ಎಸಿ ಹಾಗೂ ದೇವಾಲಯದ ಆಡಳಿತಾಧಿಕಾರಿ ಬಿ.ಎ.ಜಗದೀಶ್, ತಹಸೀಲ್ದಾರ್ ಶಿವಶಂಕರಪ್ಪ ಸಮ್ಮುಖದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸುಮಾರು 10 ಹುಂಡಿಗಳ ಎಣಿಕೆ ಕಾರ್ಯ ನಡೆಯಿತು.
ಹಾಸನಾಂಬೆ ದೇವಾಲಯದ ಒಟ್ಟು 9 ಹುಂಡಿಗಳಿಂದ 21,34,052 ರೂ ಸಂಗ್ರಹವಾಗಿದ್ದರೆ, ಸಿದ್ದೇಶ್ವರ ದೇವಾಲಯದ 1 ಹುಂಡಿಯಲ್ಲಿ 1,45,720 ರೂ. ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ. ಇದಲ್ಲದೆ ವಿದೇಶಿ ಕರೆನ್ಸಿ ಹಾಗೂ ಚಿನ್ನಾಭರಣ ಸಹ ಹುಂಡಿ ಸೇರಿವೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿಯ ಆದಾಯ ಗಣನೀಯವಾಗಿ ಗಣನೀಯವಾಗಿ ಕಡಿಮೆಯಾಗಿದೆ.
ಇದಕ್ಕೆ ಮಹಾಮಾರಿ ಕರೋನಾಗೆ ಸಾರ್ವಜನಿಕ ದರ್ಶನದ ನಿಷೇಧ ಮಾಡಿದ್ದು ಪ್ರಮುಖ ಕಾರಣವಾಗಿದೆ. ಇನ್ನೂ ಕಳೆದ ಬಾರಿ ಹಾಸನಾಂಬೆ ದೇವಾಲಯದ ಒಂದರ ಹುಂಡಿ ಕಾಣಿಕೆ, 1.31,24,424 ಕೋಟಿ ಇತ್ತು.ಇದರಲ್ಲಿ ಸಿದ್ದೇಶ್ವರ ದೇವಾಲಯದ್ದು 12,18,329 ಲಕ್ಷರೂ ಬಂದಿತ್ತು. ಒಟ್ಟಾರೆ ಎರಡೂ ದೇವಾಲಯಗಳಿಂದ 1,43,42,753 ಕೋಟಿ ರೂ. ಕಾಣಿಕೆ ರೂಪದಲ್ಲಿ ಸಂಗ್ರಹವಾಗಿತ್ತು.ಆದರೆ ಇದನ್ನು ನೋಡಿದರೆ ಈವರುಷ ದಾಖಲೆಯ ಪ್ರಮಾಣದಲ್ಲಿ ಎಂದೂ ಆಗಲಾರದ ಕಡಿಮೆ ಪ್ರಮಾಣದಲ್ಲಿ ದೇಣಿಗೆ ಹರಿದು ಬಂದಿದೆ. ಭಕ್ತರ ಬರದಿಂದಾಗಿ ದೇವಾಲಯಕ್ಕೆ ಬರುವ ಆದಾಯದ ಪ್ರಮಾಣ ಕಡಿಮೆಯಾಗಿದ್ದರೆ ಇತ್ತ ಈವರುಷವೂ ಕೂಡಾ ಪ್ರತಿ ವರುಷದಂತೆ ಭಕ್ತರು ಹತ್ತಾರು ಬೇಡಿಕೆಗಳ ಈಡೇರಿಕೆಗೆ ಪತ್ರಗಳನ್ನು ಬರೆದು ದೇಣಿಕೆ ಪೆಟ್ಟಿಗೆಯಲ್ಲಿ ಹಾಕಿದ್ದಾರೆ.ಸಾಕಷ್ಟು ಪ್ರಮಾಣದಲ್ಲಿ ಈವರುಷವೂ ಕೂಡಾ ಭಕ್ತರು ಪತ್ರಗಳನ್ನು ಹಾಕಿದ್ದು ಕಂಡುಬಂದಿದ್ದು ದೇಣಿಗೆ ಪೆಟ್ಟಿಗೆಗಳನ್ನು ತೆಗೆದಾಗ ಇಂದು ಅವುಗಳು ಕಂಡುಬಂದವು.
ವಿವಿಧೆ ಬೇಡಿಕೆ ಈಡೇರಿಸು ತಾಯೆ ಎಂದು ಹತ್ತಾರು ಕೈ ಬರಹದ ಪತ್ರಗಳ ಮೂಲಕ ಹಾಸನಾಂಬೆಯ ಭಕ್ತರು ತಮ್ಮ ತಮ್ಮ ನಿವೇದನೆಯನ್ನು ಈ ಮೂಲಕ ಮಾಡಿಕೊಂಡಿದ್ದಾರೆ.ಕೌಟುಂಬಿಕ ಸಮಸ್ಯೆ ಸರಿಪಡಿಸು, ಮಾಡಿರುವ ಸಾಲ ಬೇಗ ತೀರುವಂತೆ ಮಾಡು, ಮದುವೆ ಮಾಡಿಸು, ಹಣಕಾಸು ಸಮಸ್ಯೆ ಬಗೆಹರಿಸು ತಾಯೆ ಎಂದೆಲ್ಲಾ ಪ್ರಾರ್ಥಿಸಿಕೊಂಡಿದ್ದಾರೆ.ಮತ್ತೆ ಕೆಲವರು ಒಳ್ಳೆ ಕೆಲಸ ಕೊಡಿಸು ಹಾಸನಾಂಬೆ ಎಂದು ಬೇಡಿಕೊಂಡಿದ್ದರೆ, ಕೊರೊನಾ ಮಹಾಮಾರಿ ಹೋಗಲಾಡಿಸು ಎಂದು ಕೆಲವರು ಕೇಳಿಕೊಂಡಿದ್ದಾರೆ. ಈ ನಡುವೆ ಹಾಸನಾಂಬೆ ಪಾಸ್ ವಿತರಣೆ, ಕೆಲವರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಿ, ಜನಸಾಮಾನ್ಯರಿಗೆ ನಿರಾಕರಣೆ ತಾರತಮ್ಯದ ವಿರುದ್ಧ ಕೆಲವರು ಸುದೀರ್ಘ ಪತ್ರ ಬರೆದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಈ ನಡುವೆ ಕುಟುಕ ಮಹಾಶಯನೊಬ್ಬ ನನ್ನ ಕುಡಿತದ ಚಟದಿಂದ ಪತ್ನಿ ದೂರವಾಗಿದ್ದಾಳೆ. ಬೆಳಗ್ಗೆ, ಮಧ್ಯಾಹ್ನ ಕುಡಿಯುವುದಿಲ್ಲ. ರಾತ್ರಿ ಕುಡಿದರೆ ಕ್ಷಮಿಸಿ, ಪತ್ನಿಯನ್ನು ಮತ್ತೆ ಒಂದಾಗಿಸು ಅಮ್ಮಾ ಎಂದು ಪ್ರತಾಪ್ ಎಂಬಾತ ವಿಶೇಷ ಮನವಿ ಮಾಡಿಕೊಂಡಿದ್ದಾನೆ.
ಒಟ್ಟಿನಲ್ಲಿ ಈ ಬಾರಿಯ 12 ದಿನಗಳ ಜಾತ್ರಾ ಮಹೋತ್ಸವ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಅಚ್ಚುಕಟ್ಟು ಕ್ರಮದಿಂದಾಗಿ ಯಾವುದೇ ಗೊಂದಲ ಇಲ್ಲದೆ ಸಾಂಗವಾಗಿ ನಡೆದಿದೆ. ನಿರ್ಬಂಧದ ನಡುವೆಯೂ ವಿಶೇಷ ಆಹ್ವಾನಿತರು, ಗಣ್ಯರು ಸೇರಿ ಸುಮಾರು 40 ಸಾವಿರಕ್ಕೂ ಅಧಿಕ ಮಂದಿ ದೇವಿಯ ದರ್ಶನ ಪಡೆದಿದ್ದಾರೆ ಎಂದು ಅಂದಾಜಿಸಲಾಗಿದ್ದು ಕರೋನಾದ ನಡುವೆಯೂ ಈವರುಷದ ಜಾತ್ರೆಗೆ ತೆರೆ ಬಿದಿದ್ದು ಒಂದು ಕಡೆ ಆದಾಯದಲ್ಲಿ ಕಡಿಮೆಯಾದ್ರೆ ಮತ್ತೊಂದೆಡೆ ಭಕ್ತರು ಬರೆದಿರುವ ಬೇಡಿಕೆಗಳ ಪತ್ರಗಳಿಗೆ ಮಾತ್ರ ಯಾವುದೇ ಖೋತಾ ಆಗಿಲ್ಲ.