ಧಾರವಾಡ –
ಧಾರವಾಡ ಶಹರ ಠಾಣೆ ಇನ್ಸ್ಪೆಕ್ಟರ್ ಚಾಲಕ ಬಸವರಾಜ ಕಡಕೋಳ ಪತ್ನಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಇವರ ಪತ್ನಿ ಇಂದು ವಿಧಿವಶರಾಗಿದ್ದಾರೆ.ಕಳೆದ ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೇ ಇಂದು ಮನೆಯಲ್ಲಿ ನಿಧನರಾಗಿದ್ದಾರೆ. ಒರ್ವ ಗಂಡು ಮಗ ಇದ್ದಿದ್ದು ನಿಧನದಿಂದಾಗಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಇಲಾಖೆ ಸಿಬ್ಬಂದಿ ಗಳು ಸಂತಾಪ ಸೂಚಿಸಿದ್ದಾರೆ.ಇನ್ನೂ ಬಸವರಾಜ ಕಡಕೋಳ ಕಳೆದ ಹಲವಾರು ವರುಷಗಳಿಂದ ಧಾರವಾಡದ ಶಹರ ಠಾಣೆಯಲ್ಲಿ ಇನ್ಸ್ಪೆಕ್ಟರ್ ಚಾಲಕರಾಗಿ ಕರ್ತವ್ಯ ಮಾಡತಾ ಇದ್ದಾರೆ.