ಧಾರವಾಡ –
ಧಾರವಾಡ ಕೋರ್ಟ್ ಸರ್ಕಲ್ ಸಮಸ್ಯೆ ಯಾರಿಗೂ ಕಾಣುತ್ತಿಲ್ವಾ ಕೇಳುತ್ತಿಲ್ವಾ ಯಾಕಿಷ್ಟು ಮೌನ ಸಂಚಾರಿ ಪೊಲೀಸರೇ,RTO ಅಧಿಕಾರಿ ಗಳೇ,ಮಹಾನಗರ ಪಾಲಿಕೆಯವರೇ ನಿಮಗೇ ನಾದ್ರು ಸಾಮಾಜಿಕ ಜವಾಬ್ದಾರಿ ಇದ್ದರೆ ಈ ವ್ಯವಸ್ಥೆಯನ್ನು ಒಮ್ಮೆ ನೋಡಿ
ಸಾಮಾನ್ಯವಾಗಿ ಯಾವುದೇ ಒಂದು ಕಚೇರಿ ಅಂದಾಕ್ಷಣ ಅಲ್ಲಿ ಸರಿಯಾಗಿ ಕುಳಿತುಕೊಳ್ಳಲು ವ್ಯವಸ್ಥೆ ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ ಸರಿಯಾಗಿ ನಿಂತುಕೊಳ್ಳಲು ವಿಶ್ರಾಂತಿ ಯಿಂದ ಕುಳಿತುಕೊಳ್ಳುವ ವ್ಯವಸ್ಥೆ ಇರಬೇಕು ಇದು ಒಂದು ವ್ಯವಸ್ಥೆ.
ಆದರೆ ಧಾರವಾಡದ ಕೋರ್ಟ್ ಸರ್ಕಲ್ ನಲ್ಲಿನ ವ್ಯವಸ್ಥೆ ಯಾರಿಗೂ ಕಾಣುತ್ತಿಲ್ಲ ಕೇಳುತ್ತಿಲ್ಲ. ಕೋರ್ಟ್ ಸರ್ಕಲ್ ನಲ್ಲಿರುವ ಪ್ರತಿಯೊಬ್ಬ ವ್ಯಾಪಾರಿಗಳು ಕೇವಲ ವ್ಯಾಪಾರಕ್ಕಾಗಿ ಮಾತ್ರ ತಮ್ಮ ಮಳಿಗೆಗಳನ್ನು ಕಚೇರಿ ಗಳನ್ನು ಮಾಡಿ ಕೊಂಡಿದ್ದಾರೆ ಹೊರತಾಗಿ ಜನರಿಗೆ ಯಾವುದೇ ರೀತಿಯ ಸೌಲಬ್ಯಗಳನ್ನು ವ್ಯವಸ್ಥೆಯನ್ನು ನೀಡಿಲ್ಲ ಮಾಡಿಲ್ಲ.
ಕೋರ್ಟ್ ಸರ್ಕಲ್ ನಲ್ಲಿ ಬಹುತೇಕ ಪ್ರಮಾಣ ದಲ್ಲಿ ಟ್ರಾವೆಲ್ಸ್ ನ ಪಿಕ್ ಆಪ್ ಪಾಯಿಂಟ್ ಗಳಿದ್ದು ಕೇವಲ ಜನರನ್ನು ಹತ್ತಿಸಿಕೊಳ್ಳುವ ಪಾಯಿಂಟ್ ಗಳಾಗಿದ್ದು ಸಂಜೆಯಾಗುತ್ತಿದ್ದಂತೆ ರಸ್ತೆ ಮೇಲೆಯೇ ಜನರು ಬಸ್ ಗಳನ್ನು ನೋಡುತ್ತಾ ಪುಟ್ ಪಾತ್ ಗಳ ಮೇಲೆಯೇ ನಿಂತುಕೊಳ್ಳಬೇಕಿದೆ.
ಕುಳಿತುಕೊಳ್ಳಲು ಯಾವುದೇ ಸರಿಯಾದ ವ್ಯವಸ್ಥೆಯಿಲ್ಲ ಶೌಚಾಲಯದ ಸೌಲಭ್ಯಗಳಿಲ್ಲ ನಿಂತುಕೊಳ್ಳಬೇಕು ಎಂದರೆ ಪುಟ್ ಪಾತ್ ಗಳೇ ಆಸರೆಯಾಗಿವೆ.ಹೀಗಿರುವಾಗ ಯಾರು ಹೇಳೊರು ಕೇಳೊರು ಇಲ್ಲದಂತಾಗಿದೆ.ಕೇವಲ ಹಣ ಬಂದರೆ ಮಾತ್ರ ಸಾಕು ಎಂಬಂತಹ ಟ್ರಾವೆಲ್ಸ್ ಗಳ ಮಾಲೀಕರಿಗೆ ಯಾರು ಹೇಳೊರು ಕೇಳೊರು ಇಲ್ದದಂತಾಗಿದೆ.
ತಿಂಗಳಾಗುತ್ತಿದಂತೆ ಮಾಮೂಲಿ ತಗೆದುಕೊಳ್ಳುವ ಸಂಚಾರಿ ಪೊಲೀಸರಿಗೆ RTO ಅಧಿಕಾರಿಗಳಿಗೆ ಇನ್ನೂ ತಾವೇ ಮಾಡಿದ್ದೇ ಆಟ ಎಂಬಂತೆ ಇರುವ ಮಹಾನಗರ ಪಾಲಿಕೆಯವರಿಗೆ ಇದ್ಯಾವುದು ಕಾಣುತ್ತಿಲ್ವಾ ಕೇಳುತ್ತಿಲ್ವಾ ಪಾಲಿಕೆಗೆ ಖಡಕ್ ಆಯುಕ್ತರು ಏನೋ ಬಂದಿದ್ದಾರೆ ಆದರೆ ಇದ್ಯಾವುದು ಅವರಿಗೆ ಕಾಣುತ್ತಿಲ್ವಾ.
ಇತ್ತ ಮಹಿಳಾ ಪೊಲೀಸ್ ಆಯುಕ್ತರು ಕೂಡಾ ಖಡಕ್ ಆಗಿದ್ದು ಅವರಿಗೂ ಕೂಡಾ ಇಲ್ಲಿನ ಅದರಲ್ಲೂ ಮಹಿಳಾ ಪ್ರಯಾಣಿಕರ ಸಮಸ್ಯೆಗಳು ಕಾಣುತ್ತಿಲ್ವಾ ಎಂಬ ಪ್ರಶ್ನೆ ಕಾಡುತ್ತಿದೆ.ಯಾವುದೇ ಸೌಲಭ್ಯಗಳಿಲ್ಲದೇ ಧಾರವಾಡದ ಈ ಒಂದು ಕೋರ್ಟ್ ಸರ್ಕಲ್ ನ್ನು ನೋಡುತ್ತಿದ್ದರೆ ಅಯ್ಯೋ ಅನಿಸುತ್ತದೆ.ನಿತ್ಯ ಇಲ್ಲಿಂದ ನೂರಾರು ಖಾಸಗಿ ಬಸ್ ಗಳ ಪಿಕಪ್ ಪಾಯಿಂಟ್.
ಆದ್ರೂ ಇಲ್ಲಿ ಕೂಡಲು ವ್ಯವಸ್ಥೆ ಇಲ್ಲ.ಶೌಚಾಲಯ ಇಲ್ಲವೇ ಇಲ್ಲ.ಪಾಪ ವಯಸ್ಕರು,ಮಕ್ಕಳನ್ನು ಹೊತ್ತ ತಾಯಂದಿರು,ಅನಾರೋಗ್ಯ ಪೀಡಿತರು ಹೇಗೆ ನಿಲ್ಲಬೇಕು ಯಾರಿಗೂ ಕೂಡಾ ಚಿಂತೆ ಪರಿಜ್ಞಾನವಿಲ್ಲ.ಟ್ರಾಫಿಕ್ ಅವ್ಯವಸ್ಥೆ ಇನ್ನೂ ಮಳೆಗಾಲದಲ್ಲಿಂತೂ ಸ್ಥಿತಿ ಭಯಾನಕ. ಇನ್ನೂ ಈ ಒಂದು ವಿಚಾರವನ್ನು ಸಾರ್ವಜನಿಕರೊಬ್ಬರು ಸಾಮಾಜಿಕ ಜಾಲ ತಾಣದಲ್ಲಿ ಬರೆದುಕೊಂಡಿ ದ್ದಾರೆ
RTO,ಟ್ರಾಫಿಕ್ ಪೊಲೀಸ್,ಖಾಸಗಿ ಬಸ್ ಮಾಲೀಕರು ಹಣ ಬಂದ್ರೆ ಸಾಕಾ ವ್ಯವಸ್ಥೆ ಹೊಣೆ ಇಲ್ವಾ ಜನಪ್ರತಿನಿಧಿಗಳು ಅಷ್ಟೊಂದು ಹೃದಯ ಶೂನ್ಯರಾ ಪ್ರಯಾಣಿಕರು ಮನುಷ್ಯರು ಸ್ವಾಮಿ ಜನರೂ ಧ್ವನಿ ಎತ್ತದಷ್ಟು ಹೀಗೆ ಸಾಮಾಜಿಕ ಜಾಲ ತಾಣಗಳಲ್ಲಿ ಧಾರವಾಡದ ಕೋರ್ಟ್ ಸರ್ಕಲ್ ವ್ಯವಸ್ಥೆಯನ್ನು ಬರೆದಿದ್ದು
ಇದನ್ನು ಸರಿ ಮಾಡದಿದ್ದರೆ ಶೀಘ್ರದಲ್ಲಿ ಧ್ವನಿ ಎತ್ತುತ್ತೇನೆ ಎಂಬೊದನ್ನು ಕೂಡಾ ಉಲ್ಲೇಖ ಮಾಡಿದ್ದಾರೆ.ಇನ್ನಾದರೂ ಸಂಭಂಧಿಸಿದವರು ಈ ಕುರಿತಂತೆ ಧ್ವನಿ ಎತ್ತಬೇಕಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..