ಧಾರವಾಡ –
ಕೊರೊನಾ ಮಹಾಮಾರಿಯ ನಡುವೆ ಮದುವೆ ಸೇರಿದಂತೆ ಬೇರೆ ಬೇರೆ ಕಾರ್ಯಕ್ರಮ ಮಾಡುತ್ತಿ ರುವ ಸಾರ್ವಜನಿಕರಿಗೆ ಹೊಸದೊಂದು ನಿಯಮ ವನ್ನು ಧಾರವಾಡ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಜಾರಿಗೆ ತಂದಿದ್ದಾರೆ.ಹೌದು ಒಂದು ಕಡೆ ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ ಇದನ್ನು ಜಿಲ್ಲೆಯಲ್ಲಿ ನಿಯಂತ್ರಣ ಮಾಡಲು ಧಾರ ವಾಡ ಜಿಲ್ಲಾಧಿಕಾರಿ ಹೊಸದೊಂದು ಪ್ಲಾನ್ ಮಾಡಿ ದ್ದಾರೆ.ಹೌದು ಮದುವೆ ಮನೆಗೆ ಬರಬೇಕಾದರೆ ಕೈಗೆ ಬ್ಯಾಂಡ್ ಇರಲೇಬೇಕು.
ಕೈಗೆ ಬ್ಯಾಂಡ್ ಹಾಕಿಕೊಳ್ಳಬೇಕು ಇಲ್ಲದೇ ಹೋದ್ರೆ ದಂಡ ಫಿಕ್ಸ್.ಅರೇ ಮದುವೆಗೂ ಬ್ಯಾಂಡ್ ಗೂ ಏನು ಸಂಬಂಧ ಅಂತಿರಾ.ಹೌದು ಕೊರೋನಾ ಪ್ರಕರಣ ಗಳು ಹೆಚ್ಚಾಗುತ್ತಿರೊ ಹಿನ್ನೆಲೆ ಸರ್ಕಾರದ ಹೊಸ ಮಾರ್ಗಸೂಚಿ ಅನ್ವಯ ಮದುವೆಯಲ್ಲಿ ವಿಶೇಷ ಸುರಕ್ಷಾ ಕ್ರಮ ಕೈಗೊಂಡಿದ್ದು,ಮುಖ್ಯವಾಗಿ ಮದುವೆ ಯಲ್ಲಿ ಪಾಲ್ಗೊಳ್ಳುವ 50 ಜನರ ಕೈಗಳಿಗೆ ಬ್ಯಾಂಡ್ ಧರಿಸಲು ಧಾರವಾಡ ಜಿಲ್ಲಾಡಳಿತ ವಿನೂತನ ಕ್ರಮ ಜಾರಿಗೊಳಿಸಿದೆ.
ಈ ಕುರಿತು ಪ್ರಕಟಣೆ ನೀಡಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಧಾರವಾಡ ಜಿಲ್ಲೆಯಲ್ಲಿ ಮಹಾನಗರ ಪಾಲಿಕೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮೇ.4 ರವರೆಗೆ ಜರುಗುವ ಮದುವೆಗಳಿಗೆ ಅನುಮತಿ ಪಡೆ ಯುವುದು ಕಡ್ಡಾಯ ಮಾಡಲಾಗಿದೆ.ಮದುವೆಗಳ ಲ್ಲಿ ಪಾಲ್ಗೊಳ್ಳುವ 50 ಜನರ ಕೈಗಳಿಗೆ ಬ್ಯಾಂಡ್ ಧರಿಸಲು ಆಯೋಜಕರಿಗೆ ಅನುಮತಿ ನೀಡಲು ತಿಳಿಸಿದೆ.
ಈ ನಿಯಮ ಪಾಲನೆ ಹಾಗೂ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ವಿಶೇಷ ಕ್ರಮ ಕೈಗೊ ಳ್ಳಲಾಗಿದೆ.ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಲ ಯ ಸಹಾಯಕ ಆಯುಕ್ತರು ಹಾಗೂ ಗ್ರಾಮೀಣ ಪ್ರದೇಶ ಸೇರಿದಂತೆ ಉಳಿದ ಎಲ್ಲ ತಾಲೂಕು ವ್ಯಾಪ್ತಿ ಯಲ್ಲಿ ತಹಶೀಲ್ದಾರರು ಮದುವೆಗಳ ಆಯೋಜನೆಗೆ ಅನುಮತಿ ನೀಡಲು ಆದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಬ್ಯಾಂಡ್‌ಗಳು ಜಲ ನಿರೋಧಕವಾಗಿವೆ.ಕೈಗಳಿಗೆ ಧರಿಸಿದಾಗ ಮಡಿಕೆ ಬೀಳುವುದಿಲ್ಲ.ಒಬ್ಬ ವ್ಯಕ್ತಿ ಒಂದು ಸಲ ಧರಿಸಿದರೆ ಅದನ್ನು ತೆಗೆದು ಮರುಬಳಕೆ ಮಾಡಲು,ಮತ್ತೊಬ್ಬರಿಗೆ ಬ್ಯಾಂಡ್ ವರ್ಗಾಯಿಸಲು ಬರುವುದಿಲ್ಲ.ಒಂದು ವೇಳೆ ವರ್ಗಾಯಿಸಿದರೆ ಅದು ತುಂಡಾಗುತ್ತದೆ.ಇದರಿಂದ ಕೇವಲ 50 ಜನ ಮದುವೆ ಗಳಲ್ಲಿ ಭಾಗವಹಿಸುವುದರ ಮೇಲೆ ನಿಗಾವಹಿಸಲು ಸಾಧ್ಯವಾಗುತ್ತದೆ.
ಈ ಬ್ಯಾಂಡ್ ಧರಿಸಿದ ಮದುವೆಯು ಅನುಮತಿ ಪಡೆದಿರುವುದನ್ನು ಗುರುತಿಸುತ್ತದೆ. ಮಾರ್ಗಸೂಚಿ ಯಲ್ಲಿ ತಿಳಿಸಿದ ಸಂಖ್ಯೆಗಿಂತ ಹೆಚ್ಚು ಜನ ಕಂಡುಬಂ ದಲ್ಲಿ ಮದುವೆ ಆಯೋಜಕರ ಹಾಗೂ ಮದುವೆ ಮಂಟಪದ ಮಾಲೀಕರ ಮೇಲೆ ಎಫ್‌ಐಆರ್ ದಾಖ ಲಿಸಿ, ಕಲ್ಯಾಣ ಮಂಟಪ ಸೀಜ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ