ಧಾರವಾಡ ಜಿಲ್ಲೆಯೂ ಅನ್ ಲಾಕ್ ಬಂತು ಹೊಸ ಆದೇಶ…..

Suddi Sante Desk

ಧಾರವಾಡ –

ಪಾಸಿಟಿವಿಟಿ ಕಡಿಮೆ ಇದ್ದರೂ ಕೂಡಾ ಮತ್ತೆ ಲಾಕ್ ಡೌನ್ ಪಟ್ಟಿಗೆ ಸೇರಿಸಿದ್ದ ಧಾರವಾಡ ಜಿಲ್ಲೆಯನ್ನು ನಾಳೆಯಿಂದ ಅನ್ ಲಾಕ್ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರ ಮಾತುಕತೆ ಯಿಂದಾಗಿ ರಾಜ್ಯ ಸರ್ಕಾರದ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಜಿಲ್ಲೆಗೆ ಅನ್ ಲಾಕ್ ನೀಡಿದ್ದಾರೆ.

ಹೀಗಾಗಿ ಜಿಲ್ಲೆಯಲ್ಲಿ ನಾಳೆ ಎಲ್ಲವೂ ಆರಂಭವಾಗ ಲಿದ್ದು ಬೆಳಿಗ್ಗೆ 6 ಗಂಟೆಯಿಂದ 5 ಗಂಟೆಯ ವರೆಗೆ ಎಲ್ಲವೂ ಲಭ್ಯವಾಗಲಿದೆ‌‌.ಜಿಲ್ಲೆಯಲ್ಲಿ ಪಾಸಿಟಿವಿಟಿ ಕಡಿಮೆ ಇದ್ದರೂ ಕೂಡಾ ಜಿಲ್ಲೆಗೆ ಲಾಕ್ ಡೌನ್ ಮಾಡಿ ಹಳೇಯ ಆದೇಶವನ್ನು ಮುಂದೂವರಿಸ ಲಾಗಿತ್ತು.ಈ ಕುರಿತು ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗಿತ್ತು ಇದರೊಂದಿಗೆ ಸಚಿವ ಜಗದೀಶ್ ಶೆಟ್ಟರ್ ಕೂಡಾ ಮಾತನಾಡಿ ಕೊನೆಗೂ ಜಿಲ್ಲೆಯನ್ನು ಅನ್ ಲಾಕ್ ಮಾಡಿಸಿ ಹೊಸ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ನಾಳೆಯಿಂದ ಜಿಲ್ಲೆಯಲ್ಲಿ ಬೆಳಿಗ್ಗೆ ಯಿಂದ ಸಂಜೆಯ 5 ಗಂಟೆ ವರೆಗೆ ಎಲ್ಲವೂ ಆರಂಭ ವಾಗಲಿದ್ದು ಜುಲೈ 5 ರವರೆಗೆ ಈ ಒಂದು ಆದೇಶ ಅನ್ವಯವಾಗಲಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.