ಎರಡನೇ ಹಂತದ ಮತದಾನಕ್ಕೆ ಸಿದ್ದಗೊಂಡ ಧಾರವಾಡ ಜಿಲ್ಲೆ

Suddi Sante Desk

ಹುಬ್ಬಳ್ಳಿ – ನಾಳೆ ಎರಡನೇ ಹಂತದ ಗ್ರಾಮ ಪಂಚಾಯತಿ ಚುನಾವಣೆ ನಡೆಯಲಿದೆ.ಇದಕ್ಕಾಗಿ ಧಾರವಾಡ ಜಿಲ್ಲೆ ಸಿದ್ದಗೊಂಡಿದೆ‌. ಜಿಲ್ಲೆಯ ಕುಂದಗೋಳ, ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕು ವ್ಯಾಪ್ತಿಯಲ್ಲಿ ಗ್ರಾ.ಪಂ.ಸಾರ್ವತ್ರಿಕ ಚುನಾವಣೆಗೆ ಜರುಗಲಿದೆ.

ಎರಡನೇಯ ಹಂತದ ಒಟ್ಟು 71 ಗ್ರಾ.ಪಂ.ಗಳ 385 ಮತಕ್ಷೇತ್ರಗಳಲ್ಲಿ ಮತದಾನ ಜರುಗಲಿದೆ‌.
165319 ಪುರುಷ, 157723 ಮಹಿಳೆ, 5
ಇತರೆ ಮತದಾರರು ಮತ ಚಲಾಯಿಸಲಿದ್ದಾರೆ. 1032 ಗ್ರಾ.ಪಂ.ಸದಸ್ಯರ ಸ್ಥಾನಗಳಲ್ಲಿ 2974
ಅಭ್ಯರ್ಥಿಗಳು ಸ್ಪರ್ಧಿಸಿದ್ದು. 62 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿವೆ. 469 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

80 ಚುನಾವಣೆ ಅಧಿಕಾರಿ, 86 ಸಹಾಯಕ ಚುನಾವಣೆ ಅಧಿಕಾರಿ, 469 ಮತಗಟ್ಟೆ ಅಧ್ಯಕ್ಷಾಧಿಕಾರಿ, 469 ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ ಹಾಗೂ 938 ಮತಗಟ್ಟೆ ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

2063 ಸಿಬ್ಬಂದಿಗಳನ್ನು ಕಾಯ್ದಿರಿಸಲಾಗಿದೆ. 35 ಸೆಕ್ಟರ್ 105 ರೂಟ್ ಗುರುತಿಸಲಾಗಿದೆ. 61 ಬಸ್ 113 ಇತರೆ 113 ವಾಹನ ನಿಯೋಜಿಸಲಾಗಿದೆ. ಪ್ರತಿ ಮತಗಟ್ಟೆಗೆ 2 ರಂತೆ 938 ಆರೋಗ್ಯ ಸಿಬ್ಬಂದಿ ನೇಮಿಸಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.