ಹುಬ್ಬಳ್ಳಿ –
ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ ಹುಬ್ಬಳ್ಳಿಯಲ್ಲಿ ನಡೆಯಿತು. ನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಉದ್ಘಾಟಿಸಿದರು.
ನಂತರ ವೇದಿಕೆಯ ಮೇಲೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಾರ್ಷಿಕ ಪ್ರಶಸ್ತಿ ಪ್ರಧಾನ ನಡೆಯಿತು. ಹಿರಿಯ ಪತ್ರಕರ್ತರಾದ ಹನುಮಂತ ಹೂಗಾರ ಇವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು , ಇನ್ನೂ ಇನ್ನೊರ್ವ ಹಿರಿಯ ಪತ್ರಕರ್ತರು ಶ್ರೀಮತಿ ಜಯಶ್ರೀ ವಾಳ್ವೇಕರ ಅವರಿಗೆ ಅವ್ವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಇದರೊಂದಿಗೆ 2019-2020 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳ ಪುರಸ್ಕ್ರತರಿಗೆ ಪ್ರಶಸ್ತಿ ಪ್ರಧಾನವನ್ನು ಮಾಡಲಾಯಿತು. ಶ್ರೀಮತಿ ಕಮಲವ್ವ ಸೋಮಶೇಖರ ಬುರ್ಲಬುಡ್ಡಿ ಅವರ ಹೆಸರಿನಲ್ಲಿ ಕೊಡಮಾಡುವ ಅತ್ಯುತ್ತಮ ನಗರ ವರದಿಗಾರಿಕೆ ಪ್ರಶಸ್ತಿಯನ್ನು ಸಂಯುಕ್ತ ಕರ್ನಾಟಕದ ಪ್ರಧಾನ ವರದಿಗಾರರಾದ ಪ್ರಕಾಶ್ ಶೇಟ್ ಅವರಿಗೆ ನೀಡಲಾಯಿತು.
ದಿ.ಶ್ರೀಮತಿ ಮರಿಗೆಮ್ಮ ಬಸಪ್ಪ ಹೂಗಾರ ಇವರ ಹೆಸರಿನಲ್ಲಿ ಕೊಡಮಾಡುವ ಅತ್ಯುತ್ತಮ ನಗರ ವರದಿಗಾರಿಕೆ ಪ್ರಶಸ್ತಿಯನ್ನು ಪ್ರಜಾವಾಣಿ ಪತ್ರಿಕೆಯ ಹಿರಿಯ ವರದಿಗಾರಾದ ಕೃಷ್ಣಿ ಶಿರೂರ ಇವರಿಗೆ ನೀಡಲಾಯಿತು.
ಜೀತೆಂದ್ರ ದಯಾಳಜಿ ಮಜೇಥಿಯಾ ಹೆಸರಿನಲ್ಲಿ ಕೊಡಮಾಡುವ ಅತ್ಯುತ್ತಮ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಯನ್ನು ಕಲಘಟಗಿ ಉದಯವಾಣಿ ಪತ್ರಿಕೆಯ ವರದಿಗಾರರಾದ ಪ್ರಭಾಕರ ನಾಯಕ ಇವರಿಗೆ ನೀಡಲಾಯಿತು.
ಶ್ರೀ ಸುಲೇಮಾನ ಅಬ್ದುಲ್ ಅಜೀಜಸಾಬ ಮುನವಳ್ಳಿ ಇವರ ಹೆಸರಿನಲ್ಲಿ ಕೊಡಮಾಡುವ ಅತ್ಯುತ್ತಮ ಲೇಖನ ಪ್ರಶಸ್ತಿಯನ್ನು ಪ್ರಜಾವಾಣಿಯ ವರದಿಗಾರರಾದ ಪ್ರಮೋದ ಇವರಿಗೆ ನೀಡಲಾಯಿತು.
ಇನ್ನೂ ದಿ.ಕೃಷ್ಣಚಾರ್ಯ ರಾಘವಾಚಾರ್ಯ ಗಂಡಮಾಲಿ ಇವರ ಹಸರಿನಲ್ಲಿ ಕೊಡಮಾಡುವ ಅತ್ಯುತ್ತಮ ಲೇಖನ ಪ್ರಶಸ್ತಿಯನ್ನು ವಿಜಯವಾಣಿಯ ವರದಿಗಾರರಾದ ನಾಗರಾಜ ಹೆಗಡೆ ಮತ್ತಿಗಾರ ಇವರಿಗೆ ನೀಡಲಾಯಿತು. ಎಂ ಡಿ ಗೊಗೇರಿ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಯನ್ನು ವಿಜಯವಾಣಿಯ ಛಾಯಾಗ್ರಾಹಕರಾದ ಗುರು ಭಾಂಡಗೆ ಇವರಿಗೆ ನೀಡಲಾಯಿತು. ಡಾ ಬಿ ಎಫ್ ದಂಡಿನ್ ಅವರ ಹೆಸರಿನಲ್ಲಿ ಕೊಡುವ ಅತ್ಯುತ್ತಮ ಪುಟ ವಿನ್ಯಾಸ ಪ್ರಶಸ್ತಿಯನ್ನು ಸಂಯುಕ್ತ ಕರ್ನಾಟಕದ ಮಂಜುನಾಥ ಎಸ್ ಹೂಗಾರ ಇವರಿಗೆ ನೀಡಲಾಯಿತು.
ಇನ್ನೂ ಆಕ್ಸಫರ್ಡ್ ಕಾಲೇಜ್ ಅತ್ಯುತ್ತಮ ಟಿವಿ ವರದಿಗಾರಿಕೆ ಪ್ರಶಸ್ತಿಯನ್ನು ದಿಗ್ವಿಜಯ ನ್ಯೂಸ್ ನ ವರದಿಗಾರರಾದ ಹರ್ಷ ಕುಲಕರ್ಣಿ ಇವರಿಗೆ ನೀಡಲಾಯಿತು.
ದಿಗ್ವಿಜಯ ಕ್ಯಾಮೆರಾ ಜರ್ನಲಿಸ್ಟ್ ವಿನಾಯಕ ಪೂಜಾರಿ ಇವರಿಗೆ ನೀಡಲಾಯಿತು.
ದಿ ಅಣ್ಣಪ್ಪ ಶೆಟ್ಟಿ ಹೆಸರಿನಲ್ಲಿ ಕೊಡಮಾಡುವ ಅತ್ಯುತ್ತಮ ಟಿವಿ ವರದಿಗಾರಿಕೆ ಪ್ರಶಸ್ತಿಯನ್ನು ಪಬ್ಲಿಕ್ ಟಿವಿ ವರದಿಗಾರರಾದ ನವೀನ ಪರದೇಶಿ ಹಾಗೂ ಪಬ್ಲಿಕ್ ಟಿವಿ ಕ್ಯಾಮೆರಾ ಜರ್ನಲಿಸ್ಟ್ ನಾರಾಯಣಗೌಡ ಇವರಿಗೆ ನೀಡಲಾಯಿತು.
ಈ ಎಲ್ಲಾ ಪ್ರಶಸ್ತಿಗಳನ್ನು ಸಾಧಕ ಪತ್ರಕರ್ತರಿಗೆ ಅವರ ಕುಟುಂಬದ ಸದಸ್ಯರೊಂದಿಗೆ ನೀಡಿ ಗೌರವಿಸಲಾಯಿತು. ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಸೇರಿದಂತೆ ಹಲವು ಗಣ್ಯರು ಪ್ರಶಸ್ತಿ ನೀಡಿ ಗೌರವಿಸಿದರು.
ಇನ್ನೂ ಈ ಒಂದು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ,ವಿಧಾನ ಪರಿಷತ್ ಸದಸ್ಯರಾದ ಶ್ರೀನಿವಾಸ ಮಾನೆ,ಆಕ್ಸ್‌ಫರ್ಡ್ ಕಾಲೇಜ್ ಮುಖ್ಯಸ್ಥರಾದ ವಸಂತ ಹೊರಟ್ಟಿ ,ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಇನ್ನೂ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಜಗದೀಶ್ ಬುರ್ಲಬುಡ್ಡಿ , ಗಿರೀಶ ಪಟ್ಟಣಶೆಟ್ಟಿ ಗುರುರಾಜ ಹೂಗಾರ, ಪ್ರಧಾನ ಕಾರ್ಯದರ್ಶಿ ಸುಶೀಲೇಂದ್ರ ಕುಂದರಗಿ, ಖಚಾಂಚಿ ಗುರುನಾಥ ಭಾಂಡಗೆ,ಕಾರ್ಯದರ್ಶಿಗಳಾದ ಡಾ ವಿರೇಶ ಹಂಡಗಿ,ಕೃಷ್ಣಾ ದಿವಾಕರ ,ಪರಶುರಾಮ ತಹಶೀಲ್ದಾರ, ಸೇರಿದಂತೆ ರಾಜು ವಿಜಾಪುರ,ಲೋಚನೇಶ ಹೂಗಾರ,ಪ್ರಕಾಶ ನೂಲ್ವಿ,ಮೆಹಬೂಬ ಮುನವಳ್ಳಿ,ಸೇರಿದಂತೆ ಕಾರ್ಯಕಾರಿ ಮಂಡಳಿಯ ಸದಸ್ಯರು ಎಲ್ಲಾ ಮಾಧ್ಯಮಗಳ ಪತ್ರಕರ್ತರು ಕುಟುಂಬದಸ್ಥರು ಸಮಾರಂಭದಲ್ಲಿ ಪಾಲ್ಗೊಂಡು ವಾರ್ಷಿಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೇ ಮೆರಗು ನೀಡಿದರು.