ಧಾರವಾಡ –
ಧಾರವಾಡದ ಹೊರವಲಯದ ಇಟಿಗಟ್ಟಿ ಬಳಿ ನಡೆದ ಭೀಕರ ರಸ್ತೆ ಅಪಘಾತ ವಿಚಾರ ಕುರಿತು ಮೃತರಾದ ಕುಟುಂಬದ ಸದಸ್ಯರು ನಾಳೆ ಪ್ರತಿಭಟನೆ ಮಾಡಲಿದ್ದಾರೆ.ಅಪಘಾತದಲ್ಲಿ ಮೃತರಾದ ಸದಸ್ಯರ ಕುಟುಂಬದವರು ನಾಳೆ ಬೆಳಿಗ್ಗೆ ದಾವಣಗೆರೆ ಯಿಂದ ಹೊರಟು ಧಾರವಾಡಗೆ ಆಗಮಿಸಲಿದ್ದಾರೆ.

ಮುಖ್ಯವಾಗಿ ಈ ಒಂದು ಹೋರಾಟ ಪ್ರತಿಭಟನೆ ರಾಷ್ಟ್ರೀಯ ಹೆದ್ದಾರಿ ವಿಚಾರದಲ್ಲಿ ದಿವ್ಯ ನಿರ್ಲಕ್ಷ್ಯ ತೋರುತ್ತಿರುವ ಹೆದ್ದಾರಿ ವೈಫಲ್ಯದ ವಿರುದ್ದವಾಗಿದ್ದು ಭವಿಷ್ಯದಲ್ಲಿ ಇಂಥಹ ದುರ್ಘಟನೆ ತಪ್ಪಿಸಲು ಜಾಗೃತಿ ಮೂಡಿಸುವ ಉದ್ದೇಶದಿಂದ ದಾವಣಗೆರೆ ಯಿಂದ ಅಪಘಾತ ಸ್ಥಳಕ್ಕೆ ಆಗಮಿಸಲಿದ್ದಾರೆ.

ಮೃತರಾದವರ ಎಲ್ಲಾ ಕುಟುಂಬದ ಸದಸ್ಯರು ಈ ಒಂದು ಪ್ರತಿಭಟನೆಯಲ್ಲಿ ಪಾಲ್ಗೊಂಡು ಪ್ರತಿಭಟನೆ ಮಾಡಿ ನಂತರ ಸ್ಥಳದಲ್ಲಿ ಅಗಲಿದ ಎಲ್ಲರಿಗೂ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಿದ್ದಾರೆ. ದಿವ್ಯ ನಿರ್ಲಕ್ಷ್ಯ ತೋರಿದ ಹೆದ್ದಾರಿ ಅಧಿಕಾರಿಗಳ ವಿರುದ್ಧ ಹೋರಾಟದ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಧಾರವಾಡ ಜನತೆ ಕೈ ಜೋಡಿಸಿ ಎಂದು ಮೃತರಾದ ಕುಟುಂಬದ ಸದಸ್ಯರ ಕುಟುಂಬದವರು ಕರೆ ನೀಡಿದ್ದಾರೆ.