ಧಾರವಾಡ –
ಮಹಾಮಾರಿ ಕೋವಿಡ್ ಹಿನ್ನೆಲೆಯಲ್ಲಿ ಧಾರವಾಡ ಕರ್ನಾಟಕ ವಿವಿಗೆ ಅನಾವಶ್ಯಕ ಪ್ರವೇಶವನ್ನು ನಿಷೇಧ ಮಾಡಲಾಗಿದೆ

ಹೌದು ಕೋವಿಡ್ ಹಿನ್ನಲೆಯಲ್ಲಿ ಎಲ್ಲಾ ಗೆಟ್ ಗಳಿಗೆ ಬ್ಯಾರಿಕೆಡ್ ಹಾಕಿಸಿದ್ದಾರೆ ವಿವಿ ಆಡಳಿತ ಮಂಡಳಿ ಯವರು ಇದರೊಂದಿಗೆ ಸ್ವಯಂ ನಿರ್ಬಂಧ ವನ್ನು ಹಾಕಲಾಗಿದೆ

ವಿವಿಯಲ್ಲಿ ಕೆಲಸ ಇದ್ದವರು ಮಾತ್ರ ಒಳಗೆ ಹೋಗಬೇಕು ಎಂಬ ನಿಯಮಗಳನ್ನು ಜಾರಿಗೆ ಮಾಡಲಾಗಿದೆ ಹೀಗಾಗಿ ಕರೋನ ಹಿನ್ನೆಲೆಯಲ್ಲಿ ಈ ಒಂದು ನಿರ್ಧಾರವನ್ನು ತಗೆದುಕೊಂಡಿದ್ದಾರೆ

ಎಲ್ಲ ಕಡೆ ಸೆಕ್ಯೂರಿಟಿ ಗಾರ್ಡ್ ಗಳನ್ನು ನಿಲ್ಲಿಸಿ ಹೊರಗಿನಿಂದ ಯಾರು ಅನಾವಶ್ಯಕವಾಗಿ ಒಳಗಡೆ ಬರಲಾರದಂತೆ ನಿರ್ಬಂಧ ವಿಧಿಸಲಾಗಿದೆ

ಹೊರಗಿನಿಂದ ಜನ ಬರದಂತೆ ಈ ಒಂದು ಕ್ರಮವ ನ್ನು ಕೈಗೊಳ್ಳಲಾಗಿದೆ.ಧಾರವಾಡ ಜಿಲ್ಲೆಯಲ್ಲಿ ದಿನ ದಿಂದ ದಿನಕ್ಕೆ ಸೊಂಕಿತರು ಹೆಚ್ಚಳ ಹಿನ್ನೆಲೆಯಲ್ಲಿ ಈ ಒಂದು ಕ್ರಮವನ್ನು ಕೈಗೊಳ್ಳಲಾಗಿದೆ
ಇವತ್ತಿನಿಂದ ಅನಾವಶ್ಯಕ ಒಡಾಟ ಬಂದ್ ಮಾಡಿಸಿ ದ ಕವಿವಿ ಬ್ರೇಕ್ ಹಾಕಿ ಕೋವಿಡ್ ನಿಯಂತ್ರಣಕ್ಕೆ ಮುಂದಾಗಿದೆ






















