ಧಾರವಾಡ –
KMF ಗೆ ಹ್ಯಾಟ್ರಿಕ್ ಅಧ್ಯಕ್ಷರಾಗಿ ಶಂಕರ ಮುಗದ ಬಿಜೆಪಿ ತೆಕ್ಕೆಗೆ ಧಾರವಾಡ ಹಾಲು ಒಕ್ಕೂಟ…. .ಮುಗಿಲು ಮುಟ್ಟಿದ ಕಾರ್ಯಕರ್ತರ ಸಂಭ್ರಮ ಮತ್ತಷ್ಟು ಅಭಿವೃದ್ದಿಯತ್ತ ಸಾಗಲಿದೆ ಒಕ್ಕೂಟ
ತೀವ್ರ ಕುತುಹೂಲ ಕೆರಳಿಸಿದ್ದ ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿಯ ಶಂಕರ ಮುಗದ ಅಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ.ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷದ ನಡುವೆ ಜಿದ್ದಾಜಿದ್ದಿನ ವೇದಿಕೆಗೆ ಸಾಕ್ಷಿಯಾಗಿದ್ದ KMF ಚುನಾವಣೆಯಲ್ಲಿ ಕೊನೆಗೂ ಬಿಜೆಪಿ ಪಕ್ಷವು ಮತ್ತೆ ಅಧಿಕಾರವನ್ನು ತನ್ನ ತೆಕ್ಕೆಗೆ ಹಾಕಿ ಕೊಂಡಿದೆ.
ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿ ಶಂಕರ ಮುಗದ ಒಕ್ಕೂಟಕ್ಕೆ 3ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಉತ್ತರ ಕರ್ನಾಟಕದ ಪ್ರತಿಷ್ಠಿತ ಸಹಕಾರ ಸಂಸ್ಥೆಗಳಲ್ಲಿ ಒಂದಾಗಿರುವ ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಬೆಂಬಲಿತ ಶಂಕರ ಮುಗದ 8 ಮತ ಪಡೆದು ಕೊಂಡು ಅಧ್ಯಕ್ಷರಾಗಿ ಪುನರ್ ಆಯ್ಕೆ ಆಗಿದ್ದಾರೆ.
ಇನ್ನೂ ಕಳೆದ ವಾರವಷ್ಟೇ ಸರ್ಕಾರವು ಒಕ್ಕಾಟಕ್ಕೆ ನಾಮನಿರ್ದೇಶಿತ ಸದಸ್ಯರನ್ನಾಗಿ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಯವರ ಪತ್ನಿ ಶಿವಲೀಲಾ ಕುಲಕರ್ಣಿಯವನ್ನು ನೇಮಕ ಮಾಡಿತ್ತು.ಹೀಗಾಗಿ ಇವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರವನ್ನು ಸಲ್ಲಿಸಿದ್ದರು.
ಶಿವಲೀಲಾ ಕುಲಕರ್ಣಿ ಕೊನೆ ಕ್ಷಣದಲ್ಲಿ ಸ್ಪರ್ಧಿಸಿ ಕುತೂಹಲ ಕೆರಳಿಸಿದ್ದರು 6 ಮತ ಪಡೆದು ಪರಾಭವಗೊಂಡರು.ಧಾರವಾಡ ಕೆಎಂಎಫ್ ಅಧ್ಯಕ್ಷರ ಚುನಾವಣೆ ನಿರ್ದೇಶಕರಾದ ಶಂಕರ ಮುಗದ, ಗೀತಾ ಮರಲಿಂಗಣ್ಣವರ ಹಾಗೂ ಸರ್ಕಾರದಿಂದ ನಾಮ ನಿರ್ದೇಶಿತರಾದ ಶಿವಲೀಲಾ ಕುಲಕರ್ಣಿ ಯವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.
ಉಪಾಧ್ಯಕ್ಷ ಸ್ಥಾನಕ್ಕೆ ಸುರೇಶ್‌ಚಂದ್ರ ಹೆಗಡೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿಯಿತು. ಅಂತಿಮವಾಗಿ 8 ಮತಗಳನ್ನು ಪಡೆದ ಶಂಕರ ಮುಗದ ಅವರು ಮೂರನೇಯ ಬಾರಿಗೆ ಒಕ್ಕೂಟಕ್ಕೆ ಹ್ಯಾಟ್ರಿಕ್ ಅಧ್ಯಕ್ಷರಾಗಿ ಆಯ್ಕೆಯಾ ದರು.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವಿನ ಅಧ್ಯಕ್ಷ ಸ್ಥಾನದ ಕಾದಾಟದಲ್ಲಿ ಬಿಜೆಪಿ ಪಕ್ಷವು ಮತ್ತೆ ಒಕ್ಕೂಟದ ಅಧಿಕಾರವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು.ಶಂಕರ ಮುಗದ ಅಧ್ಯಕ್ಷರಾಗುತ್ತಿ ದ್ದಂತೆ ಮಾಜಿ ಶಾಸಕರಾದ ಅಮೃತ ದೇಸಾಯಿ, ಶಾಸಕ ಅರವಿಂದ ಬೆಲ್ಲದ,ಮಹೇಶ ಯಲಿಗಾರ, ಸುರೇಶಗೌಡ ಪಾಟೀಲ, ಶಕ್ತಿ ಹಿರೇಮಠ,ರುದ್ರಪ್ಪ ಅರಿವಾಳ,
ಶಿವು ಬೆಳಾರ,ಸಂತೋಷ ದೇವರಡ್ಡಿ,ಸೇರಿದಂತೆ ಹಲವರು ನೂತನ ಅಧ್ಯಕ್ಷರಿಗೆ ಶುಭ ಹಾರೈಸಿ ಅಭಿನಂದನೆಗಳನ್ನು ಸಲ್ಲಿಸಿದರು.ಇನ್ನೂ ಇತ್ತ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು ಮುಖಂಡರು ವಿಜ ಯೋತ್ಸವ ಆಚರಣೆ ಮಾಡಿದರು ಪರಸ್ಪರ ಬಣ್ಣ ಹಚ್ಚಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದು ಕಂಡು ಬಂದಿತು.
ಇದೇಲ್ಲದರ ನಡುವೆ ಚುನಾವಣಾ ಅಧಿಕಾರಿ ಯಾಗಿ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ದಿ ಆಯುಕ್ತ ಡಾ.ಸಂತೋಷ್ ಬಿರಾದಾರ ಕಾರ್ಯ ನಿರ್ವಹಿಸಿದರು.ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ವೀರೇಂದ್ರ ತರಲಿ,ಸೇರಿದಂತೆ ಹಲವರು ಉಪಸ್ಥಿತರಿದ್ದರು.ಒಟ್ಟಾರೆ ಒಕ್ಕೂಟಕ್ಕೆ ಮೂರನೇಯ ಬಾರಿಗೆ ಶಂಕರ ಮುಗದ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಒಕ್ಕೂಟವನ್ನು ಮತ್ತಷ್ಟು ಅಭಿವೃದ್ದಿಯತ್ತ ತಗೆದುಕೊಂಡು ಹೋಗುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.
ಏನೇ ಆಗಲಿ ಶಂಕರ ಮುಗದ ಅವರಿಗೆ ಅಧ್ಯಕ್ಷ ಗಾದಿ ಸಿಗದಂತೆ ಏನೇಲ್ಲಾ ಸರ್ವ ಪ್ರಯತ್ನವನ್ನು ಮಾಡಿದ್ದ ಆಡಳಿತಾರೂಢ ಕಾಂಗ್ರೆಸ್ ಪಕ್ಷದವರ ಪ್ರಯತ್ನ ಕೈಗೂಡಲಿಲ್ಲ.
ಸುದ್ದಿ ಸಂತೆ ನ್ಯೂಸ್ ಧಾರವಾಡ……