ಧಾರವಾಡ ಹೊಸ ಬಸ್ ನಿಲ್ದಾಣ ದಲ್ಲಿ ಭೀಕರ ರಸ್ತೆ ಅಪಘಾತ ತಪ್ಪಿತು ಅವಘಡ – ಆಗಿದ್ದೇನು ಗೊತ್ತಾ…..

Suddi Sante Desk

ಧಾರವಾಡ –

ಧಾರವಾಡ ಹೊಸ್ ಬಸ್ ನಿಲ್ದಾಣದ ಬಳಿ ಸಿಲೆಂಡರ್ ಟ್ರಕ್ ರಸ್ತೆ ಅಪಘಾತ ತಪ್ಪಿತು ದೊಡ್ಡ ಅವಘಡ

ಧಾರವಾಡದಲ್ಲಿ ಸಿಲಿಂಡರ್ ಲಾರಿ ಯೊಂದು ಬ್ರೇಕ್ ಫೇಲ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ಮತ್ತು ಬೈಕ್ ಗೆ ಡಿಕ್ಕಿ ಹೊಡೆದು ನಂತರ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ ನಗರದ ಹೊಸ ಬಸ್ ನಿಲ್ದಾಣ ಬಳಿ ಈ ಒಂದು ಅಪಘಾತ ನಡೆದಿದೆ‌.

ಈ ಒಂದು ಭೀಕರ ಅಪಘಾತ ನಡೆದಿದ್ದು ದೊಡ್ಡ ಅವಘಡ ವೊಂದು ತಪ್ಪಿದೆ. ಗ್ಯಾಸ್ ಸಿಲಿಂಡರ್ ಲಾರಿ ರಸ್ತೆ ವಿಭಾಗ ವನ್ನು ದಾಟಿದರ ಪರಿಣಾಮ ಕಾರು ಹಾಗೂ ಎರಡು ದ್ವಿಚಕ್ರಗಳಿಗೆ ಹಾನಿಯಾಗಿದೆ.

ಕಾರಿನಲ್ಲಿ ಸಂಚರಿಸುತ್ತಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯ ಗಾಗಿದ್ದು ಅದೃಷ್ಟವಾಷಾತ್ ಯಾವುದೇ ಪ್ರಾಣಹಾನಿಯಾ ಗಿಲ್ಲ.ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಮಾರ್ಗದಲ್ಲಿ ರಸ್ತೆ ತಡೆಗಳು, ಹಾಗೂ ಬೀದಿ ದೀಪ್ ಇಲ್ಲದ ಕಾರಣ ಈ ಅಪಘಾತಕ್ಕೆ ಕಾರಣ ಎಂದು ಸ್ಥಳೀಯ ರು ಹೇಳುತ್ತಿದ್ದಾರೆ.ಸಂಜೆಯಾಗುತ್ತಲೆ ರಸ್ತೆಯಲ್ಲಿ ಜನ ಸಂಚಾರ ಜಾಸ್ತಿಯಾಗುತ್ತದೆ‌ ಇದಕ್ಕೆ ಶಾಶ್ವತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ವರದಿ -ಗಣೇಶ ಸುಶಾಂತ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.