ಧಾರವಾಡ –
ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಕ್ರಿಕೇಟ್ ಬೆಟ್ಟಿಂಗ್ ಆಡುತ್ತಿದ್ದ ಜಾಲವನ್ನು ಧಾರವಾಡದ ಶಹರ ಪೊಲೀಸ್ ಠಾಣೆ ಪೊಲೀಸರು ಭೇಧಿಸಿದ್ದಾರೆ. ಜೂಜಾಟ ಆಡುವವರ ಮೇಲೆ ನಿಗಾವಹಿಸಿದ ಪೊಲೀಸರು ದಾಳಿ ಮಾಡಿ ಇಬ್ಬರನ್ನುಬಂಧಿಸಿದ್ದಾರೆ.

ಇರ್ಪಾನ್ ತಂದೆ ಮನಸೂರ ಬೆಳಗಾವಕರ, ವಯಾ; 26 ವರ್ಷ ಸಾ; ಧಾರವಾಡದ ಬಾರಾ ಇಮಾಮಗಲ್ಲಿ ಇನ್ನೂ ಇವರೊಂದಿಗೆ ಚೇತನ್ ತಂದೆ ಕಲ್ಯಾಣಿರಾವ್ ಜೋಶಿ, 28 ವರ್ಷ ಸಾ; ಧಾರವಾಡ ಮಂಗಳವಾರಪೇಟ್ ಚರಂತಿಮಠ ಓಣಿ ಇಬ್ಬರನ್ನು ದಸ್ತಗೀರ ಮಾಡಲಾಗಿದೆ .

ಇವರ ವಶದಿಂದ. 11,500/- ರೂ, ನಗದು ಹಣ, ಎರಡು ಕಂಪನಿಯ ಮೊಬೈಲ, ಒಂದು ಪೆನ್ನು ಮತ್ತು ಒಂದು ನೋಟ್ ಪುಸ್ತಕ ವಶಕ್ಕೆ ಪಡೆದುಕೊಂಡು ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ. ಈ ಪ್ರಕರಣವನ್ನು ಬೇದಿಸಿದ ಧಾರವಾಡ ಶಹರ ಠಾಣೆಯ ಇನ್ಸಪೆಕ್ಟರ್ ಹಾಗೂ ಸಿಬ್ಬಂದಿಯವರು ಕರ್ತವ್ಯ ನಿರ್ವಹಿಸಿದ್ದು, ಇವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದರು.

ಪೊಲೀಸ್ ಆಯುಕ್ತರಾದ ಕೆ.ರಾಮರಾಜನ್ ಉಪ ಪೊಲೀಸ್ ಆಯುಕ್ತರು (ಕಾವಸು) ಮತ್ತು ಶ್ರೀ ಆರ್.ಬಿ. ಬಸರಗಿ, ಉಪ ಪೊಲೀಸ್ ಆಯುಕ್ತರು (ಅಪರಾಧ ವ ಸಂಚಾರ) ಮಾರ್ಗದರ್ಶನದಲ್ಲ್ಲಿ ಧಾರವಾಡ ಶಹರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂಗಮೇಶ ದಿಡಿಗಿನಾಳ ರವರ ನೇತೃತ್ವದಲ್ಲಿ ಧಾರವಾಡ ಶಹರ ಠಾಣೆಯ ಹದ್ದಿಯ ಧಾರವಾಡ ಮಣಕಿಲ್ಲಾ ಮುಖ್ಯ ರಸ್ತೆ ಮೇಲೆ ಈ ಕೆಳಕಂಡ ಆರೋಪಿತರು ಕ್ರಿಕೇಟ್ ಬೆಟ್ಟಿಂಗ್‍ದಲ್ಲಿ ತೊಡಗಿದಾಗ ದಾಳಿ ಮಾಡಿ ಆರೋಪಿಗಳನ್ನು ಬಂಧನ ಮಾಅಲಾ.