ಧಾರವಾಡ –
ಕಳೆದ ಎರಡು ದಿನಗಳ ಹಿಂದೆ ಧಾರವಾಡದ ಮಾಳ ಮಡ್ಡಿಯಲ್ಲಿ ನಡೆದ ಸ್ವಾತಿ ಪೊಟೊ ಸ್ಟುಡಿಯೋ ಕಳ್ಳತನ ಪ್ರಕರಣವನ್ನು ವಿದ್ಯಾಗಿರಿ ಪೊಲೀಸರು ಬೇಧಿಸಿದ್ದಾರೆ.

ಕಳ್ಳತನ ನಡೆದ ಕುರಿತು ಸ್ಟುಡಿಯೋ ಮಾಲೀಕ ದತ್ತಪ್ರಸಾದ ರಾಹುಲ್ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದ್ದು ಈ ಒಂದು ದೂರು ದಾಖಲಾಗುತ್ತಿದ್ದಂತೆ ಮೇಲಾಧಿಕಾ ರಿಗಳ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಮಹಾಂತೇ ಶ್ ಬಸಾಪೂರ ಮತ್ತು ಟೀಮ್ ಕಾರ್ಯಾಚರಣೆ ಮಾಡಿ ಪ್ರಕರಣವನ್ನು ಬೇಧಿಸಿದ್ದಾರೆ

ಹೌದು ಕಾರ್ಯಾಚರಣೆ ನಡೆಸಿ ಕಳ್ಳತನ ಮಾಡಿದ ಇಬ್ಬರು ಮೀಸೆ ಚಿಗರದ ಯುವಕರನ್ನು ಬಂಧನ ಮಾಡಿದ್ದಾರೆ. ಬಂಧಿತರು ಧಾರವಾಡದ ಲಕ್ಷ್ಮೀ ಸಿಂಗನಕೇರಿ ನಿವಾಸಿಗಳಾಗಿದ್ದಾರೆ

ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶ ನದಲ್ಲಿ ಹಾಗೇ ಧಾರವಾಡದ ಎಸಿಪಿ ಅನುಷಾ ಅವರೊಂದಿಗೆ ಆರಂಭಗೊಂಡ ತನಿಖೆ ಎರಡೇ ದಿನಗಳಲ್ಲಿ ವಿದ್ಯಾಗಿರಿ ಪೊಲೀಸರು ಭೇಧಿಸಿದ್ದಾರೆ.

ಇನ್ನೂ ಸುನೀಲ್ ಶೀತಿಮನಿ ಮತ್ತು ಮಂಜುನಾಥ ಡಂಬರಿಕೊಪ್ಪ ಇಬ್ಬರು ಬಂಧಿತರಾಗಿದ್ದಾರೆ. ಬಂಧಿತ ರಿಂದ ಕಳ್ಳತನ ಮಾಡಿದ್ದ ನಾಲ್ಕೂವರೆ ಲಕ್ಷ ರೂಪಾಯಿ ಮೌಲ್ಯದ ಕ್ಯಾಮೆರಾ ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ

ಇನ್ನೂ ಈ ಒಂದು ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್ ಮಹಾಂತೇಶ್ ಬಸಾಪೂರ,ಪಿಎಸ್ ಐ ಅಧಿಕಾರಿಗಳಾದ ಸಚಿನಕುಮಾರ ದಾಸರಡ್ಡಿ,ಎಸ್ ಆರ್ ತೆಗೂರ,ದೇವೆಂದ್ರ ಮಾಬಿನಿಂಡಿ,ಬಿ ಎಮ್ ಅಂಗಡಿ,ಸಿಬ್ಬಂದಿಗಳಾದ ಎಮ್ ಎಫ್ ನಧಾಪ್, ಐಪಿ ಬುರ್ಜಿ,ಆರ್ ಕೆ ಅತ್ತಾರ,ಬಿ ಎಮ್ ಪಠಾತ್ ಎಮ್ ಸಿ ಮಂಕಣಿ,ಎಮ್ ಜಿ ಪಾಟೀಲ್,ಎಮ್ ವೈ ಮಾದರ,ಡಿ ಎಸ್ ಸಾಂಗ್ಲಿಕರ,ಎ ಎಮ್ ಹುಯಿಲ ಗೋಳ,ಹೆಚ್ ಕೆ ಘುಡುನಾಯ್ಕರ್, ಸೇರಿದಂತೆ ಹಲವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
