ಧಾರವಾಡ –
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಧಾರವಾಡದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಧಾರವಾಡ ತಾಲೂಕಾ ಘಟಕದಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಬಮ್ಮಕ್ಕನವರ ಅವರಿಗೆ ಮನವಿ ನೀಡಲಾಯಿತು.
ಪ್ರಮುಖ ಬೇಡಿಕೆಗಳಾದ ಶೀಘ್ರದಲ್ಲಿ ಗುರು ಸ್ಪಂದನಾ ಕಾರ್ಯ ಮಾಡುವುದು, ಪ್ರತಿ ತಿಂಗಳು ವೇತನ ಪ್ರಮಾಣ ಪತ್ರ ನೀಡುವುದು ಹಾಗೂ ವೇತನ ವಿವರದ ಮೊಬೈಲ್ ಮೇಸೇಜ ಬರುವಂತೆ ಕ್ರಮ ತೆಗೆದು ಕೊಳ್ಳುವುದು,ಶೀಘ್ರದಲ್ಲಿ ಗಳಿಕೆ ರಜೆ ನಗದೀಕರನ ಮಾಡಿಕೊಡುವುದು,ಹೊಸದಾಗಿ ನೇಮಕವಾದ ಶಿಕ್ಷಕ /ಶಿಕ್ಷಕಿಯರಿಗೆ ಸೇವಾ ಪುಸ್ತಕ ತೆರೆಯುವುದು,AGT/GPT ಶಿಕ್ಷಕ /ಶಿಕ್ಷಕಿಯರಿಗೆ ವಾರ್ಷಿಕ ಬಡ್ತಿ ನೀಡುವುದು ಹಾಗೂ ಬಾಕಿ ಮೊತ್ತ ಪಾವತಿಸುವುದು, 2020 ರ ಬೇಸಿಗೆ ರಜೆಯಲ್ಲಿ covid -19 ಕಾರ್ಯ ಮಾಡಿದ ಶಿಕ್ಷಕ /ಶಿಕ್ಷಕಿಯರಿಗೆ ನಿಯಮಾನುಸಾರ ಗಳಿಕೆ ರಜೆ ಹೀಗೆ ಬೇಡಿಕೆ ಈಡೇರಿಸುವಂತೆ ಒತ್ತಾಯ ಮಾಡಲಾಯಿತು.
ಜಿಲ್ಲಾ ಪ್ರಧಾನ ಕಾರ್ಯ ದರ್ಶಿಗಳಾದ ರಾಜಶೇಖರ ಹೊನ್ನಪ್ಪನವರ,ಧಾರವಾಡ ತಾಲೂಕಾ ಅಧ್ಯಕ್ಷರಾದ ಅಜಿತಕುಮಾರ ದೇಸಾಯಿ,ಪ್ರಧಾನ ಕಾರ್ಯದರ್ಶಿಗಳಾದ N.S.ಕಮ್ಮಾರ, ಮತ್ತು ಪದಾಧಿಕಾರಿಗಳಾದ ಶ್ರೀಮತಿ ಭಾರತಿ ಮನ್ನಿಕೇರಿ,ಶ್ರೀಮತಿ ಗೀತಾ ದೊಡ್ಡಮನಿ
ಪ್ರಧಾನ ಗುರುಮಾತೆಯರಾದ ಶ್ರೀಮತಿ L. L ಕೇಸರಿ ಶ್ರೀಮತಿ ರಾಜೇಶ್ವರಿ ಸವಣೂರ ಮತ್ತು ಪ್ರಧಾನ ಗುರುಗಳಾದ ಕರಣಿ ಹಾಗೂ ಶಿಕ್ಷಕರುಗಳಾದ,ಕೃಷ್ಣ ಬೊಂಗಾಳೆ,ಅಶೋಕ ಕುರ್ತಕೋಟಿ,ಶ್ರೀಮತಿ ಪದ್ಮಾವತಿ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು