ಧಾರವಾಡ –
ರೇಲ್ವೆ ಟ್ಯಾಕ್ ಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಯುವಕನನ್ನು ಧಾರವಾಡದಲ್ಲಿ ರಕ್ಷಣೆ ಮಾಡಲಾಗಿದೆ.
ಧಾರವಾಡದ ಶ್ರೀನಗರ ಕ್ರಾಸ್ ನಲ್ಲಿರುವ ರೇಲ್ವೆ ಟ್ಯಾಕ್ ನಲ್ಲಿ ಈ ಒಂದು ಘಟನೆ ನಡೆದಿದೆ. 40 ವರ್ಷದ ಕಲ್ಲಯ್ಯ ಕುಂಬಿ ಎಂಬುವರೇ ಆತ್ಮಹತ್ಯೆಗೆ ಯತ್ನಿಸಿ ಬದುಕಿರುವ ವ್ಯಕ್ತಿಯಾಗಿದ್ದಾರೆ.
ನಗರದ ಮಾಳಾಪೂರ ಬಡಾವಣೆಯ ನಿವಾಸಿಯಾ ಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದು ಕಾಲು ಸೇರಿದಂತೆ ಹಲವು ಭಾಗಗಳಲ್ಲಿ ಗಾಯಗೊಂಡಿದ್ದು ಆಸ್ಪತ್ರೆಗೆ 108 ಸಿಬ್ಬಂದಿ ದಾಖಲು ಮಾಡಿದ್ದಾರೆ.
ಇನ್ನೂ ಈ ಕುರಿತು ಪೊನ್ ಕರೆ ಬರುತ್ತಿದ್ದಂತೆ ಮೊಹಮ್ಮದ ಶಫಿ ದಫೇದಾರ ಇವರ ಮಾರ್ಗದರ್ಶನದಲ್ಲಿ108 ಸಿಬ್ಬಂದಿಗಳಾದ ಶಾಂತೇಶ ಪೈಲಟ್ ಲೊಕೇಶ ಪಾಟೀಲ ಕಾರ್ಯಾಚರಣೆ ಮಾಡಿ ಗಾಯಾಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.