ಧಾರವಾಡ –
ಮೇ 1 ರಿಂದ ಬ್ರೆಜಿಲ್ ನಲ್ಲಿ ನಡೆಯಲಿರುವ ಡೆಫ್ ಒಲಿಂಪಿಕ್ ಗೆ ಧಾರವಾಡ ಜಿಲ್ಲೆಯಿಂದ ವಿದ್ಯಾರ್ಥಿನಿ ಯೊಬ್ಬಳು ಆಯ್ಕೆ ಯಾಗಿದ್ದಾಳೆ.ಹೌದು ಜಿಲ್ಲೆಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಬಿ.ಕಾಂ ಪ್ರಥಮ ವರ್ಷದಲ್ಲಿ ಅಭ್ಯಸಿಸುತ್ತಿರುವ ನಿಧಿ ಶಿವರಾಮ ಸುಲಾಖೆ ಇವರು ಮೇ 1 ರಿಂದ 15 ರವರೆಗೆ ಬ್ರೆಜಿಲ್‍ನಲ್ಲಿ ನಡೆಯಲಿರುವ ಡೆಫ್ ಒಲಿಂಪಿಕ್‍ನಲ್ಲಿ ಭಾಗವಹಿಸಲಿದ್ದಾರೆ ಕರ್ನಾಟಕದಿಂದ ಎಕೈಕ ಮಹಿಳೆ ಹಾಗೂ ಭಾರತದಿಂದ ಇಬ್ಬರು ಮಾತ್ರ ಟೇಕ್ವಾಂಡೋ ಮಹಿಳೆಯರ ವಿಭಾಗ ದಲ್ಲಿ-67 ಕೆಜಿಗೆ ಭಾರತದಿಂದ ಪ್ರತಿನಿಧಿಸಲಿದ್ದಾರೆ.
ವಿದ್ಯಾರ್ಥಿನಿಯರ ಸಾಧನೆಯನ್ನು ಮೆಚ್ಚಿ ಕಾಲೇಜು ಅಭಿ ವೃದ್ಧಿ ಸಮಿತಿಯ ಅಧ್ಯಕ್ಷ ಅರವಿಂದ ಬೆಲ್ಲದ ಪ್ರಾಂಶುಪಾಲ ಡಾ.ಸರಸ್ವತಿ.ಆರ್.ಕಳಸದ,ದೈಹಿಕ ಶಿಕ್ಷಣ ನಿರ್ದೇಶಕ ಪ್ರೋ.ಆರ್.ಬಿ. ಸೊನೇಖಾನ ಹಾಗೂ ಸಿ.ಡಿ.ಸಿ ಸಮಿತಿ ಸದಸ್ಯರು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.