ಧಾರವಾಡ –
ಕಳ್ಳತನ ಪ್ರಕರಣಗಳನ್ನು ತಡೆಗಟ್ಟಲು ಧಾರವಾಡ ಉಪನಗರ ಪೊಲೀಸರು ಮುಂದಾಗಿದ್ದಾರೆ. ಕಳೆದ ಹಲವಾರು ದಿನಗಳಿಂದ ಸಣ್ಣ ಪುಟ್ಟ ಪ್ರಮಾಣದಲ್ಲಿ ಕಳ್ಳತನಗಳು ನಡೆಯುತ್ತಿದ್ದು ಇದರಿಂದ ಉಪನಗರ ಪೊಲೀಸರು ಸಾರ್ವಜನಿಕರೊಂದಿಗೆ ಸಭೆ ಮಾಡಿ ಸಂಪೂರ್ಣವಾಗಿ ಕಳ್ಳತನ ನಿಯಂತ್ರಣಕ್ಕೆ ಮುಂದಾಗಿದ್ದಾರೆ.

ಹೌದು ಕಳ್ಳತನ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರು ಏನು ಮಾಡಬೇಕು ನಿಮ್ಮ ಪಾತ್ರ ಏನು ಈ ಎಲ್ಲಾ ವಿಚಾರಗಳ ಕುರಿತು ಉಪನಗರ ಪೊಲೀಸ್ ಠಾಣೆ ಪೊಲೀಸರು ಸಭೆ ಮಾಡಿದರು.

ಇನ್ಸ್ಪೆಕ್ಟರ್ ಪ್ರಮೋದ್ ಯಲಿಗಾರ,PSI ಶ್ರೀಮಂತ ಹುಣಸಿಕಟ್ಟಿ ಮತ್ತು ಕಚೇರಿಯ ಸಿಬ್ಬಂದಿ ಗಳು ಸಾರ್ವಜನಿಕರೊಂದಿಗೆ ಸಭೆ ಮಾಡಿದರು.

ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸೋನಾಪುರ ರಾಜನಗರದ ಸಾರ್ವಜನಿಕರೊಂದಿಗೆ ಮತ್ತು ಅಲ್ಲಿನ ಯುವಕರೊಂದಿಗೆ ಹನುಮಂತ ದೇವಸ್ಥಾನದಲ್ಲಿ ಸಭೆ ಮಾಡಿದರು.

ಕಳೆದ ಹಲವಾರು ದಿನದಿಂದ ರಾಜನಗರ, ಸೋನಾಪುರ,ಹಾತ್ತರಕಿ ಪ್ಲಾಟ ,ಉದಯನಗರ, ಬಸವ ಕಲ್ಯಾಣ ನಗರದಲ್ಲಿ ಮನೆ ಕಳ್ಳತನಗಳು ನಡೆಯುತ್ತಿದ್ದು ಹೀಗಾಗಿ ಪೊಲೀಸರು ಸಭೆ ಮಾಡಿದರು.

ರಾತ್ರಿ ವೇಳೆಯಲ್ಲಿ ನಿಮಗೆ ಯಾರಾದರೂ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದರೆ ನಮ್ಮ ಗಮನಕ್ಕೆ ತರಬೇಕು ಮತ್ತು ಒಂದು ತಿಂಗಳ ವರೆಗೆ ಆಸಕ್ತಿ ಇರುವ ಯುವಕರು

ನಮ್ಮ ಜೊತೆಯಲ್ಲಿ ನಾವು ಹೇಳುವ ಮತ್ತು ನಮ್ಮ ಮಾರ್ಗದರ್ಶನದಂತೆ ತಾವು ರಾತ್ರಿ ನಮಗೆ ಸಹಾಯ ಸಹಕಾರ ನೀಡಬೇಕೆಂದು ಮನವಿ ಮಾಡಿ ಕಳ್ಳರನ್ನು ಹಿಡಿಯಲು ಜನರ ಸಹಕಾರ ಮುಖ್ಯ ಎಂದು ತಿಳಿ ಹೇಳಿದರು

ಇನ್ನೂ ಈ ಒಂದು ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಮುಖಂಡ ಮಂಜು ನಡಟ್ಟಿ ಅವರೊಂದಿಗೆ ಹಿರಿಯರು ಯುವಕರು ಉಪಸ್ಥಿತರಿದ್ದರು. ಪೊಲೀಸ್ ಅಧಿಕಾರಿಗಳೊಂದಿಗೆ ಮಹೇಶ್ ದೊಡ್ಡಮನಿ,ಶಿವು ದೊಡಮನಿ,ಕಿರಣ ಡೊಂಕನ್ನವರ,ಆನಂದ ಬಡಿಗೇರ,ಶ್ರೀಕಾಂತ್ ತಲ್ಲೂರ,ಪ್ರದೀಪ ಕುಂದಗೋಳ, ನಾಗರಾಜ, ಬಸವರಾಜ ,ಸೇರಿದಂತೆ ಹಲವು ಸಿಬ್ಬಂದಿ ಗಳು ಉಪಸ್ಥಿತರಿದ್ದರು.