ಧಾರವಾಡ –
ಜೂಜಾಟ ಆಡುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿ ನಾಲ್ಕು ಜನ ಆರೋಪಿಗಳನ್ನು ಧಾರವಾಡದಲ್ಲಿ ಬಂಧಿಸಲಾಗಿದೆ. ಧಾರವಾಡ ಉಪನಗರ ಪೊಲೀಸರು ದಾಳಿ ಮಾಡಿ ಬಂಧನ ಮಾಡಿದ್ದಾರೆ. ಧಾರವಾಡ ಉಪನಗರ ಠಾಣೆಯ ವ್ಯಾಪ್ತಿಯ ಪೆಂಡಾರಗಲ್ಲಿ ಗರಡಿ ಮನೆ ಹತ್ತಿರ, ಸಾರ್ವಜನಿಕ ಜಾಗೆಯಲ್ಲಿ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಪ್ರಮೋದ ಯಲಿಗಾರ.PSI ಶ್ರೀಮಂತ ಹುಣಸಿಕಟ್ಟಿ ಹಾಗೂ ಸಿಬ್ಬಂದಿಯವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಮಹಮ್ಮದ್ ಶಫಿ ,ಶಹಬುದ್ದಿನ ಮಾಣಿಕ , ರೋಷನಜಮೀರ ಖುತುಬುದ್ದಿನ ಬಸನಕೊಪ್ಪ, ಮೀರಖಾನ ಹುಸೇನಖಾನ ಪಠಾಣ ಬಂಧಿತರಾಗಿದ್ದಾರೆ. ಬಂಧಿತರಿಂದ 1470/- ಗಳನ್ನು ಜಪ್ತ ಮಾಡಿದ್ದು, ಈ ಕುರಿತು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದ್ದು ಇರುತ್ತದೆ.