ಧಾರವಾಡ –
ಖೊಟಾ ನೋಟು ಜಾಲವನ್ನು ಧಾರವಾಡ ದಲ್ಲಿ ಉಪನಗರ ಪೊಲೀಸರು ಪತ್ತೆ ಹಚ್ಚಿದ್ದಾರೆ.ಹೌದು ಚಲಾವಣೆ ಯತ್ನಿಸುತ್ತಿದ್ದ ಮಾಹಿತಿಯನ್ನು ಪಡೆದ ಉಪನಗರ ಇನ್ಸ್ಪೆಕ್ಟರ್ ಮತ್ತು ಟೀಮ್ ನವರು ಕಾರ್ಯಾಚರಣೆ ಮಾಡಿ ಜಾಲವನ್ನು ಪತ್ತೆ ಮಾಡಿ ಆರೋಪಿ ಗಳನ್ನು ಬಂಧನ ಮಾಡಿದ್ದಾರೆ
ಧಾರವಾಡದಲ್ಲಿ ಈ ಒಂದು ಟೀಮ್ ಚಲಾವಣೆಯನ್ನು ಮಾಡುತ್ತಿತ್ತಂತೆ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿ ನಾಲ್ವರನ್ನು ಬಂಧನ ಮಾಡಿದ್ದಾರೆ.500 ಮುಖ ಬೆಲೆಯ 35 ಖೋಟಾನೋಟುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.ಧಾರವಾಡ ಕೆಲಗೆರಿಯಲ್ಲಿ ಚಲಾವಣೆ ಯತ್ನವನ್ನು ಮಾಡುತ್ತಿದ್ದರು.ಸಂತೋಷ ಭೋವಿ,ರವಿ ಔರಾದಿ,ಪ್ರಜ್ವಲ ಭೋವಿ,ಮಂಜು ಬಳಗಾರ ಬಂಧಿತವಾದ ಆರೋಪಿಗಳಾಗಿದ್ದಾರೆ.ನಾಲ್ವರೂ ಧಾರವಾಡ ತಾಲೂಕಿನ ಮುಗದ ಗ್ರಾಮದವರಾಗಿದ್ದು ಪೊಲೀಸರು ಹೆಚ್ಚಿನ ತನಿಖೆ ಯನ್ನು ಮಾಡತಾ ಇದ್ದಾರೆ























