ಧಾರವಾಡ –
ಭೇಟಿಯಾಗಿ ಅವರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(KSPSTA)ಧಾರವಾಡ ತಾಲೂಕಾ ಘಟಕದವತಿಯಿಂದ ಶಿಕ್ಷಕರಿಗೆ ಗಳಿಕೆ ರಜೆ ಮಂಜೂರು ಮಾಡಲು ಮನವಿಯನ್ನು ಸಲ್ಲಿಸ ಲಾಯಿತು.ಕೋವಿಡ್-19 ಡ್ಯೊಟಿ ಮಾಡಿದ ಶಿಕ್ಷಕರಿಗೆ E L ಮಂಜೂರು ಮಾಡಲು KSPSTA ಧಾರವಾಡ ತಾಲೂಕಾ ಘಟಕದಿಂದ ಮನವಿಯನ್ನು ನೀಡಲಾ ಯಿತು.ಹೌದು ಈ ಹಿಂದೆ ಕೊವಿಡ್-19 ಸಂದರ್ಭ ದಲ್ಲಿ ಶಿಕ್ಷಕ/ಶಿಕ್ಷಕಿಯರು ಚೆಕ್ ಪೊಸ್ಟ್ ಹಾಗೂ ಆರೋಗ್ಯದ ಕುರಿತು ಮನೆ ಮನೆ ಸಮೀಕ್ಷೆ ಮಾಡುವ ಸಲುವಾಗಿ ಎಪ್ರಿಲ್ ಮತ್ತು ಮೇ ತಿಂಗಳ ಲ್ಲಿ ನಿಯೋಜನೆ ಹೊಂದಿ ರಜೆಯ ಸಮಯದಲ್ಲಿ ಕರ್ತವ್ಯ ನಿರ್ವಹಿಸಿದರ ಪ್ರಯುಕ್ತ ಶಿಕ್ಷಕರಿಗೆ ಗಳಿಕೆ ರಜೆ ನೀಡಲು ಧಾರವಾಡದ ತಹಶೀಲ್ದಾರಾದ ಸಂತೋಷ ಬಿರಾದಾರ ಅವರಿಗೆ ಮನವಿ ನೀಡಲಾಯಿತು.
ನಿಯೋಜಿಸುವಾಗ ಗರ್ಭಿಣಿಯರು, ವೈದ್ಯಕೀಯ ಪ್ರಕರಣದಡಿ,ವಿಕಲಚೇತನರು ಹಾಗೂ 50ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ವಿನಾಯತಿ ನೀಡಲು ಕೋರಿ ಮನವಿ ಸಲ್ಲಿಸಲಾಯಿತು. ಅಜಿತಕುಮಾರ ದೇಸಾಯಿ ಇವರ ನೇತೃತ್ವದಲ್ಲಿ ಈ ಒಂದು ಮನವಿ ನೀಡುವ ಕಾರ್ಯಕ್ರಮ ನಡೆಯಿತು.